SSLC ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಸಕ ಸಿಮೆಂಟ್ ಮಂಜುನಾಥ್ ಅಭಿನಂದನೆ.
ಸಕಲೇಶಪುರ :2023 ಸಾಲಿನ ಎಸ್.ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಕಲೇಶಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಸಕ ಸಿಮೆಂಟ್ ಮಂಜುನಾಥ್ ಸನ್ಮಾನಿಸಿ ಗೌರವಧನ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.
ತಾಲೂಕಿನ ಬಾಳ್ಳುಪೇಟೆಯ ವಿವೇಕ್ ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿ ರಿಷಿಕ್ ಸಿನಾನ್ 10 ನೇ ತರಗತಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕ ಗಳಿಸುವುದರೊಂದಿಗೆ ಶೇ 98.88% ಪಡೆದು ಇಡೀ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದನು. ತಾಲೂಕಿನ ಬೆಳಗೋಡು ಗ್ರಾಮದ ತಂದೆ ಅಬ್ದುಲ್ ಗಫಾರ್ ತಾಯಿ ನಸೀಮ ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ ಆರ್ ಗುರುದೇವ್, ಎ ಟಿ ರಾಮಸ್ವಾಮಿ, ಹಾಸನ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿ ಜಂಬರಡಿ ಲೋಹಿತ್, ಬಿಜೆಪಿ ಮುಖಂಡರಾದ ಬಾಳ್ಳು ಮಲ್ಲಿಕಾರ್ಜುನ್ ಆಲೂರು ಮಂಡಲದ ಅಧ್ಯಕ್ಷ ನಾಗರಾಜ್ ಸೇರಿದಂತೆ ಮುಂತಾದವರಿದ್ದರು.