Saturday, April 12, 2025
Homeಸುದ್ದಿಗಳುಸಕಲೇಶಪುರಮಾಜಿ ಶಾಸಕ ಬಿ.ಆರ್ ಗುರುದೇವ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ ಕೆಲವು ಕಾರ್ಯಕರ್ತರು

ಮಾಜಿ ಶಾಸಕ ಬಿ.ಆರ್ ಗುರುದೇವ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ ಕೆಲವು ಕಾರ್ಯಕರ್ತರು

ಮಾಜಿ ಶಾಸಕ ಬಿ.ಆರ್ ಗುರುದೇವ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ ಕೆಲವು ಕಾರ್ಯಕರ್ತರು

ಸಕಲೇಶಪುರ: ತಾಲೂಕಿನ‌ ಬಾಳ್ಳುಪೇಟೆ ಗ್ರಾಮದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ನೂತನ ಶಾಸಕ ಸಿಮೆಂಟ್ ಮಂಜು ಅಭಿನಂದನಾ ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಲವು ಕಾರ್ಯಕರ್ತರು ಮಾಜಿ ಶಾಸಕ ಬಿ.ಆರ್ ಗುರುದೇವ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.

ಚುನಾವಣೆ ವೇಳೆ ಮಾಜಿ ಶಾಸಕರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ, ಅವರಿಗೆ ವೇದಿಕೆ ನೀಡಬಾರದು ಎಂದು ಅರಕಲಗೂಡು ಮಾಜಿ ಶಾಸಕರ ಎ. ಟಿ ರಾಮಸ್ವಾಮಿ ಮಾತಾನಾಡುವಾಗ ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರನ್ನು ವೇದಿಕೆ ಮೇಲಿದ್ದ ಮುಖಂಡರು ಸಮಾಧಾನ ಪಡಿಸಲು ಯತ್ನಿಸಿದರು ಸಹ ಸಮಾಧಾನಗೊಳ್ಳದ ಕಾರ್ಯಕರ್ತರು ನಾಯಕರು ಮಾತನಾಡಿದ ನಂತರ ನಮಗೂ ಮಾತನಾಡುವುದಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

RELATED ARTICLES
- Advertisment -spot_img

Most Popular