ಸಕಲೇಶಪುರ : ಕೆಪಿಟಿಸಿಎಲ್ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ.
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ವಲಯದ ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಮಂಡಳಿ ವಿರುದ್ಧ ಸಾರ್ವಜನಿಕರು ತಮ್ಮ ಆಕ್ರೋಶ ಅವರ ಹಾಕಿದ್ದಾರೆ.
ಬಾಳ್ಳುಪೇಟೆ ಸಮೀಪದ ರಂಗನಾಥ ಶಾಲೆ ಹತ್ತಿರ ವಿದ್ಯುತ್ ಕಂಬವಾಗಿ ತಂತಿಗಳು ನೆಲದಿಂದ 10 ಅಡಿ ಅಂತರದಲ್ಲಿ ನೇತಾಡುತ್ತಿದ್ದು ಅಪಾಯವನ್ನು ತಂದೊಡಿದೆ. ಇದರ ವಿರುದ್ಧ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು ತಿರುಗಾಡುವ ದಾರಿಯಲ್ಲಿ ವಿದ್ಯುತ್ ಕಂಬ ಬಾಗಿ ತಂತಿಗಳು ನೆಲಕ್ಕೆ ತಾಗುವ ಹಂತದಲ್ಲಿದ್ದು ಇಲಾಖೆಯ ಸಿಬ್ಬಂದಿಗಳು ಇದುವರೆಗೂ ಗಮನಿಸಿದೆ ಜಾಣ ಕೂರುಡುತನ ಪ್ರದರ್ಶನ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಏನಾದರೂ ಅಪಾಯವಾದರೆ ಇದಕ್ಕೆ ಚಾಮುಂಡೇಶ್ವರಿ ವಿದ್ಯುಚಕ್ತಿ ಮಂಡಳಿಗೆ ನೇರವಾಗಿ ಹೊಣೆ ಎಂದು ಆರೋಪಿಸಿದ್ದಾರೆ.