ಮಕನ ಆನೆಯ ಅಂತಿಮ ಆಟ: ನಾಳೆ ಮಕನ ಸೆರೆ ಬಹುತೇಕ ಖಚಿತ
ಸಕಲೇಶಪುರ: ತಾಲ್ಲೂಕಿನ ಮನೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ನಡೆಸಿ ಭತ್ತವನ್ನು ಹೊತ್ತೊಯ್ಯುತ್ತಿದ್ದ ಮಕನ ಕಾಡಾನೆಯನ್ನು ನಾಳೆ ಅರಣ್ಯ ಇಲಾಖೆ ಸೆರೆ ಹಿಡಿದು ಸ್ಥಳಾಂತರ ಮಾಡುವುದು ಬಹುತೇಕ ಖಚಿತವಾಗಿದೆ.ಇಂದು ಸಂಜೆ ಸಹ ಮಕನ ಕಾಡಾನೆ ಕೊಲ್ಲಹಳ್ಳಿ ಗ್ರಾಮದಲ್ಲಿ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಚೀಲವನ್ನು ತೆಗೆದು ರಸ್ತೆಯಲ್ಲಿ ತಿನ್ನುವುದನ್ನು ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.


                                    
