ದೂರದ ಅಮೇರಿಕಾ, ದುಬೈ ಹಾಗೂ ಇತರ ಅನಿವಾಸಿ ಭಾರತೀಯರಿಂದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುಗೆ ಬೆಂಬಲ
ಸಕಲೇಶಪುರ: ಜೆಡಿಎಸ್ ಶಾಸಕ ಎಚ್.ಕೆ ಕುಮಾರಸ್ವಾಮಿರವರಿಗೆ ಕೆಲವು ಅನಿವಾಸಿ ಭಾರತೀಯರು ಬೆಂಬಲಿಸಿದರೆ ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ, ದುಬೈಮತ್ತಿತರ ಕಡೆ ನೆಲೆಸಿರುವ ಸಾವಿರಾರು ಅನಿವಾಸಿ ಭಾರತೀಯರು ಸಿಮೆಂಟ್ ಮಂಜುರವರನ್ನು ಬೆಂಬಲಿಸುತ್ತಿದ್ದಾರೆ. ಅಮೇರಿಕಾದ ಕ್ಯಾಲಿಪೋರ್ನಿಯದಲ್ಲಿ ನೆಲೆಸಿರುವ ಸತೀಶ್ ಮತ್ತು ಕೃಷ್ಣಪ್ಪ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುರವರನ್ನು ಬೆಂಬಲಿಸುವ ವಿಡಿಯೋ ಹಾಕಿದ್ದು ದುಬೈನಲ್ಲಿ ನೆಲೆಸಿರುವ ಶಬರೀಶ್ ರಾಮನಾಥ್ ಸಿಮೆಂಟ್ ಮಂಜುರವರನ್ನು ಬೆಂಬಲಿಸುವ ಪತ್ರ ಬರೆದು ತಮ್ಮ ಪೋಟೋ ಹಾಕಿಕೊಂಡಿದ್ದಾರೆ. ಒಟ್ಟಾರೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಹವಾ ಈ ಬಾರಿ ವಿದೇಶಕ್ಕೂ ವ್ಯಾಪಿಸಿದೆ.