ಭಾರತೀಯ ಸ್ತ್ರೀಯರಿಗೆ ಒಂದು ಘನತೆ ತಂದು ಕೊಟ್ಟಿದ್ದು.. ಬಾಬಾ ಸಾಹೇಬ್ ಅಂಬೇಡ್ಕರ್.
ಬಾಬಾ ಸಾಹೇಬ್ ಅಂಬೇಡ್ಕರ್ ರವರ 132ನೇ ಜನ್ಮದಿನದಂದು ಸಾಹಿತಿ ಯಡೇಹಳ್ಳಿ ಆರ್ ಮಂಜುನಾಥ್ ರವರ ವಿಶೇಷ ಲೇಖನ
ಪುರುಷ ಮತ್ತು ಮಹಿಳೆಯರ ನಡುವಿನ ತಾರತಮ್ಯದ ವಿರುದ್ದ ಅವರು ದೊಡ್ಡ ಹೋರಾಟವನ್ನು ನಡೆಸಿದರು. ಸಮಾಜದಲ್ಲಿ ನೆಲೆಸಿದ್ದ ಮಹಿಳೆಯರ ಕುರಿತಾದ ಅಸಮಾನತೆಯನ್ನು ಹೋಗಲಾಡಿಸಲು ಸಾಕಷ್ಟು
ಶ್ರಮಿಸಿದರು. ‘ಹಿಂದೂ ಕೋಡ್ ಬಿಲ್ ‘ ಮೂಲಕ ಭಾರತೀಯ ಮಹಿಳೆಯರ ವಿವಾಹ, ವಿಚ್ಚೇದನ ಮತ್ತು ಉತ್ತರಾಧಿಕಾರಗಳ ವಿಷಯದಲ್ಲಿ ಬದ್ರವಾದ ನೆಲೆಯನ್ನು ಒದಗಿಸಲು ಪ್ರಯತ್ನಿಸಿದರು .
ಆದರೆ ಡಾ.ಅಂಬೇಡ್ಕರ್‌ರವರು ಪಾರ್ಲಿಮೆಂಟಿನಲ್ಲಿ ಮಂಡಿಸಿದ್ದ ತಮ್ಮ ಮಹತ್ವಾಕಾಂಕ್ಷೆಯ ‘ಹಿಂದೂ ಕೋಡ್ ಬಿಲ್’ ಗೆ ಸೋಲುಂಟಾಯಿತು. ತಮ್ಮ ಮಸೂದೆ ಪಾರ್ಲಿಮೆಂಟಿನಲ್ಲಿ ಬಿದ್ದು ಹೋದ ಮರುಘಳಿಗೆಯಲ್ಲಿ ಅವರು ನ್ಯಾಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ನೆಹರು ಮಂತ್ರಿ ಮಂಡಲದಿಂದ ಹೊರಬಂದರು . ಈ ಘಟನೆ ಡಾ.ಅಂಬೆಡ್ಕರ್‌ರವರಿಗೆ ಆದ ಸೋಲಲ್ಲ ಇಡೀ ಭಾರತೀಯ ಸ್ತ್ರೀಯರ ಸಮಾನತೆಯ ವಿರುದ್ಧ ವ್ಯವಸ್ಥಿತವಾಗಿ ನಡೆಸಿದ ಪಿತೂರಿಯಾಗಿತ್ತು ಎಂದರೆ ತಪ್ಪಾಗಲಾರದು.ಆದರೆ ಡಾ.ಅಂಬೇಡ್ಕರ್‌ರವರು ಇದರಿಂದ ವಿಚಲಿತರಾಗದೆ ಹಿಂದೂ ಮಹಿಳೆಯರ ಸಮಾನತೆಯ ದೃಷ್ಟಿಯಿಂದ ನಾಲ್ಕು ಮಸೂದೆಗಳನ್ನು ಸಂಸತ್ತಿನಲ್ಲಿ. ಮಂಡಿಸಿದರು ಮತ್ತು ಎರಡೂ ಸದನಗಳಲ್ಲೂ ಅವುಗಳಿಗೆ ಅನುಮೋದನೆಯನ್ನು ಪಡೆದರು.
ಆ ನಾಲ್ಕು ಮಸೂದೆಗಳೆಂದರೆ👇👇👇
1) ಹಿಂದೂ ವಿವಾಹ ಕಾನೂನು-1955,
2) ಹಿಂದೂ ಉತ್ತರಾಧಿಕಾರ ಕಾನೂನು-1956,
3)ಹಿಂದೂ ಅಪ್ರಾಪ್ತತೆ ಮತ್ತು ಪೋಷಕತತ್ವ ಕಾನೂನು-1956, ಮತ್ತು
4)ಹಿಂದೂ ದತ್ತಕ ಮತ್ತು ಜೀವನಾಂಶ ಕಾನೂನು-1956,
ಈ ಮಸೂದೆಗಳಿಂದ ಭಾರತೀಯ ಸ್ತ್ರೀಯರಲ್ಲಿ ಒಂದು ಘನತೆಯ ಭಾವನೆ ಮೂಡಿದ್ದರಲ್ಲಿ ಯಾವುದೇ ಸಂದೇಹವಿಲ್ಲ.ಮುಂಬೈ ಸರಕಾರದ ಎದುರಿನಲ್ಲಿ ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಭತ್ಯೆಯನ್ನು ಕೊಡಬೇಕೆಂದು ಮಸೂದೆಯನ್ನು ಮಂಡಿಸಿದರು. ಗಂಡಸು ಮತ್ತು ಹೆಂಗಸರಿಗೆ ಕೂಲಿ ನೀಡುವಲ್ಲಿ ವೆತ್ಯಾಸಗಳಿದ್ದವು. ಇದನ್ನು ವಿರೋದಿಸಿದ ಡಾ.ಅಂಬೇಡ್ಕರ್ ಗಂಡಿನಂತೆ ಹೆಂಗಸು ಕೂಡ ಕಷ್ಟ ಪಟ್ಟು ದುಡಿಯುತ್ತಾಳೆ.ಆದ್ದರಿಂದ ಸಮಾನ ವೇತನ ಕೊಡಬೇಕು ಎಂದು ಹೋರಾಟ ನಡೆಸಿದರು.ದುಡಿಯುವ ಮಹಿಳೆಯರಿಗೆ ಹೆರಿಗೆ ರಜೆಗಳನ್ನು ಸಂವಿಧಾನಬದ್ದವಾಗಿ ದೊರಕಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.
ಯಡೇಹಳ್ಳಿ”ಆರ್”ಮಂಜುನಾಥ್
ಕೆಪಿಸಿಸಿ ಸದಸ್ಯರು ಸಕಲೇಶಪುರ.