ಬೆಳಗೋಡು ವೀರಭದ್ರೇಶ್ವರ ಸ್ವಾಮಿಯ ಕೆಂಡೋತ್ಸವ ಸಂಪನ್ನ
ವೀರಣ್ಣಕೊಪ್ಪಲು ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ.
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ವೀರಣ್ಣಕೊಪ್ಪಲು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೆಂಡೋತ್ಸವ ಇಂದು ಮುಂಜಾನೆ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕಳೆದ ಎರಡು ದಿನಗಳಿಂದ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು. ಇಂದು ಮುಂಜಾನೆ ಉತ್ಸವಮೂರ್ತಿಗೆ ವಿಶೇಷ ಪುಷ್ಪಲಂಕಾರದೊಂದಿಗೆ ಅಡ್ಡೆಯಲ್ಲಿ ಪ್ರತಿಷ್ಠಾಪಿಸಿ ಕೆಂಡೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಶ್ರೀ ಸ್ವಾಮಿಯವರಿಗೆ ಬಿಲ್ವಾರ್ಚನೆ, ಮಹಾಮಂಗಳಾರತಿ, ಹಣ್ಣು ಕಾಯಿ ಸಮರ್ಪಣೆ ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು.
ಇಂದು ಮೂರು ಗಂಟೆಯವರೆಗೂ ಹಗಲು ಜಾತ್ರೆ ನಡೆಯಲಿದ್ದು ನಂತರ ಓಕಳಿ ಮತ್ತು ಶ್ರೀ ಸ್ವಾಮಿಯವರ ಉತ್ಸವ ನಡೆಯಲಿದ್ದು ವಿಶೇಷವಾಗಿ ಕಾಯಿಗೆ ಗುರಿ ಹೊಡೆಯುವ ಸ್ಪರ್ಧೆ ನಡೆಯಲಿದ್ದು ಮೊದಲು ಕಾಯಿಗೆ ಗುರಿ ಹೊಡೆದವರಿಗೆ ಬಹುಮಾನ ನೀಡಲಾಗುತ್ತದೆ. ಭಕ್ತಾದಿಗಳಿಗಾಗಿ ವಿವಿಧ ಆಟದ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತದೆ.
ಕೆಂಡೋತ್ಸವ ವೇಳೆ ಶಾಸಕ ಎಚ್.ಕೆ ಕುಮಾರಸ್ವಾಮಿ, ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್,ಸಿದ್ದೇಶ್ ನಾಗೇಂದ್ರ, ಸೇರಿದಂತೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ನೆರೆದಿದ್ದರು.