ಸಕಲೇಶಪುರ : ಕ್ರಿಕೆಟ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕುವಂತೆ ಡಿವೈಎಸ್ಪಿ ಮನವಿ.
ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್ ಗೌಡ ನೇತೃತ್ವದಲ್ಲಿ ಎಎಸ್ಪಿ ಮಿಥುನ್ ಗೆ ಮನವಿ
ಸಕಲೇಶಪುರ : ಇಂದಿನಿಂದ ಆರಂಭವಾಗುತ್ತಿರುವ ಐಪಿಎಲ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕುವಂತೆ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಗುರುವಾರ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್ ಗೌಡ ಹಾಗೂ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಎಎಸ್ಪಿ ಎಚ್.ಎನ್ ಮಿಥುನ್ ಮಾತನಾಡಿ,ಕ್ರಿಕೆಟ್ ಬೆಟ್ಟಿಂಗ್ ದಂದೆಯಲ್ಲಿ ಈ ಹಿಂದೆ ಪಾಲ್ಗೊಂಡವರನ್ನು ಠಾಣೆಗೆ ಕರೆಸಿ ಬುದ್ದಿ ಹೇಳಲಾಗುವುದು. ಎಲ್ಲರ ಮೇಲು ಹದ್ದಿನ ಕಣ್ಣಿಡಲಾಗಿದೆ. ಆದರೂ ದಂದೆಕೋರರು ತಮ್ಮ ಚಾಳಿ ಮುಂದುವರೆಸಿದರೆ ಕಾನೂನು ಮೂಲಕ ಪಾಠ ಕಲಿಸಲಾಗುವುದು. ಬೆಟ್ಟಿಂಗ್ ನೆಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದ್ದು ಅನುಮಾನಾಸ್ಪದ ವ್ಯಕ್ತಿಗಳ ದೂರವಾಣಿ ಸಂಖ್ಯೆ ಮೇಲೆ ಕಣ್ಣಿಡಲಾಗಿದೆ .ಈ ಹಿನ್ನಲೆಯಲ್ಲಿ ಹಳೆಯ ಮೊಕದಮೆಗಳ ಅನುಸಾರ ಎಲ್ಲರನ್ನೂ ಠಾಣೆಗೆ ಕರೆಯಿಸಿ ಯಾವುದೇ ಬೆಟ್ಟಿಂಗ್ ದಂದೆಯಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್ ಗೌಡ,ತಾಲೂಕು ಅಧ್ಯಕ್ಷ ವಿಜಯ್ ಕುಮಾರ್,
ಸಮಿತಿಯ ಪದಾಧಿಕಾರಿಗಳಾದ ಹನೀಫ್,ಸಂತೋಷ್, ಜಗದೀಶ್, ಗಗನ್ ಸೇರಿದಂತೆ ಮುಂತಾದವರು ಇದ್ದರು.