ಪ್ಯಾನ್ ಆಧಾರ್ ಲಿಂಕ್ ಹೆಸರಿನಲ್ಲಿ ಹೆಚ್ಚಿನ ಹಣ ಪಡೆಯುವವರ ವಿರುದ್ದ ಕಠಿಣ ಕ್ರಮ: ತಹಸೀಲ್ದಾರ್ ಮೇಘನಾ ಎಚ್ಚರಿಕೆ
ಸಕಲೇಶಪುರ: ಆಧಾರ್ ಪ್ಯಾನ್ ಲಿಂಕ್ ಹೆಸರಿನಲ್ಲಿ ದುಬಾರಿ ಹಣ ಪಡೆಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಂದು ತಹಸೀಲ್ದಾರ್ ಮೇಘನಾ ಎಚ್ಚರಿಕೆ ನೀಡಿದ್ದಾರೆ.
ಆಧಾರ್ ಪ್ಯಾನ್ ಜೋಡಣೆ ಹೆಸರಿನಲ್ಲಿ ಕೆಲವರು 1000 ರೂ ಹಣದ ಜೊತೆ ಹೆಚ್ವುವರಿಯಾಗಿ 200 ರೂಗಳಿಂದ 500 ರೂ ಪಡೆಯತ್ತಿದ್ದಾರೆ. ಇದಲ್ಲದೆ ಆದಾರ್ ಪ್ಯಾನ್ ಜೋಡಣೆಯಾಗಿದ್ದರು ಸಹ ಕೆಲವರು ಜೋಡಣೆ ಆಗಿಲ್ಲ ಎಂದು ಹೇಳಿ 1000 ಕ್ಕೂ ಹೆಚ್ಚು ಹಣ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಧಾರ್ ಹಾಗೂ ಪ್ಯಾನ್ ಲಿಂಕ್ ಹೆಸರಿನಲ್ಲಿ ದುಬಾರಿ ಹಣ ಪಡೆಯುತ್ತಿರುವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಮೇಘನಾ ಎಚ್ಚರಿಸಿದ್ದಾರೆ.