ಸಕಲೇಶಪುರ : ಬಗರ್ ಹುಕುಂ ಕಮಿಟಿ ಸಭೆ ಪ್ರಾರಂಭ.
ಸಕಲೇಶಪುರ : ನಂ 53 ನಲ್ಲಿ ಅರ್ಜಿ ಸಲ್ಲಿದವರ ವಿಲೇವಾರಿಗಾಗಿ ಸೋಮವಾರ ಮಧ್ಯಾಹ್ನ ತಾಲೂಕು ಕಚೇರಿಯಲ್ಲಿ ಶಾಸಕ ಎಚ್. ಕೆ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿದೆ.
ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಅರ್ಜಿ ವಿಲೇವಾರಿ ಯಾಗುವುದೆಂಬ ಕಾತುರದಿಂದ ತಾಲೂಕು ಕಚೇರಿಯ ಮುಂಭಾಗ ಕಾದು ಕುಳಿತಿದ್ದಾರೆ.
ಸಭೆಯಲ್ಲಿ ಬಗರ್ ಹುಕುಂ ಕಮಿಟಿಯ ಕಾರ್ಯದರ್ಶಿ, ತಹಸೀಲ್ದಾರ್ ಮೇಘನಾ,ಸದಸ್ಯರಾದ ಕ್ಯಾಮನಹಳ್ಳಿ ರಾಜ್ ಕುಮಾರ್, ಮಾಸುವಳ್ಳಿ ಚಂದ್ರು,ವನಜಾಕ್ಷಿ ಆಲೂರು, ಶಿರಸ್ತೇದಾರ್ ಉಮೇಶ್ ಸೇರಿದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.