ಸಕಲೇಶಪುರ ‘ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸಬೇಕು ಎಂಬ ಉದ್ದೇಶದಿಂದ ಅವರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ’ ಎಂದು ಶಾಸಕ ಎಚ್. ಕೆ ಕುಮಾರಸ್ವಾಮಿ ಹೇಳಿದರು.
ಸೋಮವಾರ ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
2022 – 23 ಸಾಲಿನ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ 11 ವಾಹನಗಳನ್ನು ವಿತರಣೆ ಮಾಡಿದ್ದೇವೆ.ಒಂದು ವಾಹನಕ್ಕೆ ಸುಮಾರು 87 ಸಾವಿರ ವೆಚ್ಚ ತಗುಲಿದೆ ಎಂದು ತಿಳಿಸಿದರು.
ಸಮಾಜದದಲ್ಲಿ ಅಂಗವಿಕಲರಿಗೆ ಸರ್ಕಾರ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕು ಎಂದು ಗೊತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಆದಿತ್ಯ, ಹರೀಶ್, ತಾಲೂಕು ವಿಶೇಷ ಚೇತನರ ಒಕ್ಕೂಟದ ಅಧ್ಯಕ್ಷ ಯೋಗೇಶ್, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತೆ ಗೀತಾ,ತಾಲೂಕು ಪಂಚಾಯತಿಯ ಹೊನ್ನರಾಜು ಸೇರಿದಂತೆ ಮುಂತಾದವರಿದ್ದರು.