Tuesday, April 15, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ತಾಲೂಕು ಬಿಜೆಪಿ ಘಟಕದಿಂದ ನಾಳೆ ವಿವಿಧ ಮೋರ್ಚಾಗಳ ಸಭೆ ಆಯೋಜನೆ.

ಸಕಲೇಶಪುರ ತಾಲೂಕು ಬಿಜೆಪಿ ಘಟಕದಿಂದ ನಾಳೆ ವಿವಿಧ ಮೋರ್ಚಾಗಳ ಸಭೆ ಆಯೋಜನೆ.

ಸಕಲೇಶಪುರ ತಾಲೂಕು ಬಿಜೆಪಿ ಘಟಕದಿಂದ ನಾಳೆ ವಿವಿಧ ಮೋರ್ಚಾಗಳ ಸಭೆ ಆಯೋಜನೆ.

ಚುನಾವಣಾ ಕಾರ್ಯತಂತ್ರ ಬಗ್ಗೆ ಸಭೆಯಲ್ಲಿ ಚರ್ಚೆ ಸಾಧ್ಯತೆ.

ಸಕಲೇಶಪುರ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ನಾಳೆ ಭಾನುವಾರ ಪಟ್ಟಣದ ಲಯನ್ಸ್ ಭವನದಲ್ಲಿ ತಾಲೂಕಿನ ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ತಾಲೂಕು ಬಿಜೆಪಿ ಘಟಕ ತಿಳಿಸಿದೆ.

ಮಹಿಳಾ ಮೋರ್ಚಾ, ರೈತ ಮೋರ್ಚಾ, ಪರಿಶಿಷ್ಟ ಪಂಗಡ ಹಾಗೂ ವರ್ಗಗಳ ಮೋರ್ಚಾ, ಯುವ ಮೋರ್ಚಾ ಸೇರಿದಂತೆ ಭಾಜಪದ ಎಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನು ಮಧ್ಯಾಹ್ನ 3:00 ಆಯೋಜಿಸಲಾಗಿದೆ.

ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರಕ್ಕೆ ಎರಡು ಬಾರಿ ಶಾಸಕರಿಗೆ ಆಯ್ಕೆಯಾಗಿ ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆದಿರುವ ದಿ, ಬಿ.ಬಿ ಶಿವಪ್ಪ ಮತ್ತು ಸುಶೀಲ್ ಶಿವಪ್ಪ ನವರ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತಾ ಮಾಜಿ ಶಾಸಕರುಗಳಾದ ಬಿ. ಆರ್ ಗುರುದೇವ್, ಎಚ್. ಎಂ ವಿಶ್ವನಾಥ್ ಸೇರಿದಂತೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಹಿರಿಯ ಮುಖಂಡರ ನೇತೃತ್ವದಲ್ಲಿ ನಾಳಿನ ಸಭೆ ಆಯೋಜಿಸಲಾಗಿದ್ದು ಹೆಚ್ಚಿನ ಮಹತ್ವ ಪಡೆದಿದೆ.

ಸಭೆಗೆ ಬಿಜೆಪಿಯ ಎಲ್ಲ ತಾಲೂಕು ಘಟಕದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸುವಂತೆ ತಿಳಿಸಿದೆ.

RELATED ARTICLES
- Advertisment -spot_img

Most Popular