ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ತೆರಳಲು ಕಾಂಕ್ರೀಟ್ ರಸ್ತೆ ನಿರ್ಮಾಣ
ಮೂರು ಕೋಟಿಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್. ಕೆ ಕುಮಾರಸ್ವಾಮಿ ಚಾಲನೆ
ಸಕಲೇಶಪುರ : ಇತಿಹಾಸ ಪ್ರಸಿದ್ಧ ಬೆಟ್ಟದ ಭೈರವೇಶ್ವರ ಹೋಗುವ ರಸ್ತೆ ಅಭಿವದ್ಧಿ ಕಾಮಗಾರಿಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.
ತಾಲ್ಲೂಕಿನ ಮರಗುಂದ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮೂರು ಕೋಟಿಗೂ ಅಧಿಕ ಹಣದಲ್ಲಿ ಈ ರಸ್ತೆ ಅಭಿವದ್ಧಿ ಕಾಮಗಾರಿ ನಡೆಯುತ್ತದೆ. ಇದರಿಂದ ದೇವಲಾದಕೆರೆ ವಡಚ್ಚಹಳ್ಳಿ ಮರಗುಂದ ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ, ಪ್ರವಾಸಿಗರಿಗೆ ಮತ್ತು ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಆದರೆ, ಈ ರಸ್ತೆ ಅಭಿವದ್ಧಿಗೆ ಜನರ ಸಹಕಾರ ಸಂಪೂರ್ಣ ಬೇಕು. ರಸ್ತೆ ಕಾಮಗಾರಿ ನಡೆಯು ಸಂದರ್ಭದಲ್ಲಿ ತಕರಾರು ತೆಗೆಯದೇ ಸಹಕಾರ ನೀಡಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದರು.
ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ ಸಾವಿರಕ್ಕೂ ಅಧಿಕ ಕಿಮೀ ರಸ್ತೆ ಕಾಮಗಾರಿಯನ್ನು ಮಾಡಿಸಿದ್ದೇನೆ. ಸಕಲೇಶಪುರ ಅಲೂರು ಕಟ್ಟಾಯ ಕ್ಷೇತ್ರ ವಿಸ್ತಾರವಾಗಿದ್ದು ಸರಕಾರ ಬಯಲು ಸೀಮೆಯ ಕ್ಷೇತ್ರಕ್ಕೆ ನೀಡುವ ಅನುಧಾನದಷ್ಟೆ ಮಲೆನಾಡು ಭಾಗಕ್ಕೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಈ ನೀತಿಯನ್ನು ಸರ್ಕಾರ ಬದಲಾಯಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ಸುಪ್ರದೀಪ್ತ ಯಜಮಾನ್, ಕುಮಾರ ಸ್ವಾಮಿ,ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್ ಕುಮಾರ್, ಹಾಗೂ ಗ್ರಾಮದ ಮುಖಂಡರು ಇದ್ದರು