ಸಕಲೇಶಪುರ : ಹಕ್ಕು ಪತ್ರ ನೀಡಲು ವಿಳಂಬ ನೀತಿ ಅನುಸರಿಸಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ.
ಆಕ್ರೋಶ ವ್ಯಕ್ತಪಡಿಸಿದ ಬಾಳ್ಳುಪೇಟೆ ಗ್ರಾಪಂ ಸದಸ್ಯ ರೋಹಿತ್
ಸಕಲೇಶಪುರ : ಹಲವು ದಶಕಗಳಿಂದ ವಾಸಿಸುತ್ತಿದ್ದರು ಮನೆಗಳಿಗೆ ಹಕ್ಕು ಪತ್ರ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ತಾಲೂಕು ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯ ರೋಹಿತ್ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ವಾರ್ಡಿನಲ್ಲಿ ಬರುವ ಕೆಲ ಬಡವಣೆಗಳ ಮನೆಗಳಿಗೆ ಹತ್ತಾರು ವರ್ಷಗಳು ಕಳೆದರೂ ಹಕ್ಕು ಪತ್ರ ನೀಡಲು ಅಧಿಕಾರಿಗಳಿಂದ ಸಾಧ್ಯವಾಗದೇ ಇರುವುದರಿಂದ ಗ್ರಾಮಸ್ಥರು ಮೂಲಭೂತ ಸೌಕರ್ಯ ಪಡೆಯಲು ಪರಿ ತಪ್ಪಿಸುತ್ತಿದ್ದಾರೆ.
ಈಗಾಗಲೇ 3-4 ಬಾರಿ ತಾಲೂಕು ಮಟ್ಟದ ಅಧಿಕಾರಿಗಳು ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಮನೆಗಳ ಸರ್ವೆ ಕಾರ್ಯ ಕೂಡ ಮುಗಿಸಿದ್ದರು ಹಕ್ಕು ಪತ್ರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರೆ ಎಂದು ರೋಹಿತ್ ತಮ್ಮ ಆಕ್ರೋಶ ಅವರ ಹಾಕಿದ್ದಾರೆ.
ಸೂಕ್ತವಾಗಿ ಕಾನೂನು ರೀತಿಯಲ್ಲಿ ಪರಿಶೀಲನೆ ನಡೆಸಿ ಹಕ್ಕು ಪತ್ರ ನೀಡಲು ಖುದ್ದು ಶಾಸಕರೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಸಹ ಅಧಿಕಾರಿಗಳು ಮಾತ್ರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಅಧಿಕಾರಿಗಳ ದುಂಡಾವರ್ತನೆ ಹೀಗೆ ಮುಂದುವರೆದರೆ ಗ್ರಾಮಸ್ಥರೊಟ್ಟಿಗೆ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾದಿತು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.