Sunday, November 24, 2024
Homeಸುದ್ದಿಗಳುಸಕಲೇಶಪುರಪಂಚರತ್ನ ಕಾರ್ಯಕ್ರಮಕ್ಕೆ ಬಾರದಂತೆ ಅಕ್ಷತಾಗೆ ಚಂಚಲ ಕುಮಾರಸ್ವಾಮಿ ತಾಕೀತು.

ಪಂಚರತ್ನ ಕಾರ್ಯಕ್ರಮಕ್ಕೆ ಬಾರದಂತೆ ಅಕ್ಷತಾಗೆ ಚಂಚಲ ಕುಮಾರಸ್ವಾಮಿ ತಾಕೀತು.

 

ಹಾಸನ: ನಾಳೆ ಸಕಲೇಶಪುರ ತಾಲೂಕಿನಲ್ಲಿ ನಡೆಯಲಿರುವ ಪಂಚರತ್ನ ಯಾತ್ರೆ ಕಾರ್ಯಕ್ರಮಕ್ಕೆ ಬಾರದಂತೆ ಅಕ್ಷತಾ ಕೊಡಗಲವಾಡಿ ಅವರಿಗೆ ಶಾಸಕರ ಪತ್ನಿ ಚಂಚಲಾ ಕುಮಾರಸ್ವಾಮಿ ತಾಕೀತು ಮಾಡಿದ್ದು ಇದು ರಾಜಕೀಯವಾಗಿ ಹೊಸ ಸಂಚಲನವನ್ನು ಮೂಡಿಸಿದೆ

ಆಲೂರು ತಾಲೂಕು ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯ ಮಲ್ಲಾಪುರ ಗ್ರಾಮ ಪಂಚಾಯಿತಿಯ ಸದಸ್ಯೆ ಆಗಿ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ಅಕ್ಷತಾ ಕೊಡಗಲವಾಡಿ ಅವರು ಕಳೆದ ನಾಲ್ಕೈದು ವರ್ಷಗಳಿಂದ ತನ್ನದೇ ಆದ ಹೆಸರು ಗಳಿಸಿದ್ದಾರೆ 

ಪಕ್ಷೇತರ ಅಭ್ಯರ್ಥಿಯಾಗಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿ ಅಲ್ಲಿನಿಂದ ಇಲ್ಲಿಯವರೆಗೂ ಅನೇಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಇದೀಗ ಆಲೂರು – ಸಕಲೇಶಪುರ ವಿಧಾಸಭಾ ಕ್ಷೇತ್ರದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ

ಹತ್ತು ಹದಿನೈದು ವರ್ಷಗಳಿಂದ ಜನ ಪ್ರತಿನಿಧಿಗಳಾಗಿ ಗುರುತಿಸಿಕೊಂಡಿರುವ ಯಾವೊಬ್ಬ ಮಾಡದ ಕೆಲಸಗಳು ಹಾಗೂ ಸೇವೆಗಳನ್ನು ಮಾಡುವ ಮೂಲಕ ತಾಲೂಕಿನಲ್ಲಿ ಹಿಡಿತ ಸಾಧಿಸಿರುವ ಅಕ್ಷತಾ ಅವರ ಬೆಳೆವಣಿಗೆಯ ವೇಗ ಕೆಲ ಹಿರಿಯ ಮುಖಂಡರು ಹಾಗೂ ನಾಯಕರ ನಿದ್ದೆ ಗೆಡಿಸಿವೆ ಎಂದರೆ ತಪ್ಪಾಗಲಾರದು ಇದಕ್ಕೆ ಉದಹರಣೆ ಎಂಬಂತೆ ನೆನ್ನೆ ಅಕ್ಷತಾ ಅವರಿಗೆ ಕ್ಷೇತ್ರದ ಶಾಸಕರಾಗಿರುವ ಎಚ್.ಕೆ ಕುಮಾರಸ್ವಾಮಿ ಅವರ ಪತ್ನಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಅವರು ನೇರವಾಗಿ ಕರೆ ಮಾಡಿ ತಾವು ಸಕಲೇಶಪುರ ದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬರುವುದು ಬೇಡ ಎಂದು ಹೇಳಿರುವುದು ಇದ್ದಕ್ಕೆ ಸಾಕ್ಷಿಯಾಗಿದೆ

ಇದಕ್ಕೆ ಕಾರಣವೂ ಇದೆ……..

ಕಳೆದ ಅನೇಕ ವರ್ಷಗಳಿಂದ ಪಕ್ಷೇತರ ಅಭ್ಯರ್ಥಿಯಾಗಿ ಜನಪರ ಸೇವೆ ಮಾಡುತ್ತ ಬಂದಿರುವ ಅಕ್ಷತಾ ಅವರು ತಮ್ಮ ಕೆಲಸಕ್ಕೆ ಇನ್ನಷ್ಟು ಶಕ್ತಿ ತುಂಬಲು ಯಾವುದಾದರೂ ಒಂದು ರಾಜಕೀಯ ಪಕ್ಷ ಸೇರಿದರೆ ಒಳಿತು ಎಂಬ ಆಲೋಚನೆಯಲ್ಲಿ ಇರುವಾಗ ಜೆಡಿಎಸ್ ಸೂಕ್ತ ಯೋಚಿಸಿ ತಮ್ಮದೇ ಆದ ನೂರಾರು ಸಂಖೆಯ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಜೆಡಿಎಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದರು

ಅಲ್ಲದೆ ಮುಂದಿನ ಚುನಾವಣೆಯಲ್ಲಿ ಅಕ್ಷತಾ ಅವರ ಸಹಕಾರ ಕೇಳಿ ಇತ್ತೀಚೆಗೆ ನಡೆದ ಗೌಪ್ಯ ಸಭೆಯ ವೇಳೆ ಪಕ್ಷ ಸೇರದೆ ಇದ್ದರು ಬೇರೆ ಪಕ್ಷದಲ್ಲಿ ಇದ್ದುಕೊಂಡೇ ತಮಗೆ ಪರೋಕ್ಷವಾಗಿ ಸಹಾಯ ಮಾಡುವಂತೆ ಶಾಸಕ ಕುಮಾರಸ್ವಾಮಿ ಹಾಗೂ ಚಂಚಲ ಕುಮಾರಸ್ವಾಮಿ ಕೇಳಿಕೊಂಡಿದ್ದರು ಆದರೆ ಇದಕ್ಕೆ ಒಪ್ಪದ ಅಕ್ಷತಾ ಹಿಂಬಾಗಿಲ ರಾಜಕಾರಣ ಮಾಡಲು ಒಪ್ಪಿಗೆ ಸೂಚಿಸದೆ ವಾಪಸ್ ಕಳುಹಿಸಿದ್ದರು

ಅಕ್ಷತಾ ಅವರ ವರ್ಚಸ್ಸನ್ನು ಕುಮಾರ ಸ್ವಾಮಿ ಸಹಿಸಿದರು ಚಂಚಲ ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು, ಇದೇ ಕಾರಣಕ್ಕೆ ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಬಾರದಂತೆ ತಡೆ ಒಡ್ಡಿದ್ದು ಇದು ಅಕ್ಷತಾ ಅವರನ್ನು ಮೊಳಕೆಯಲ್ಲೇ ಚಿವುಟುವ ಹುನ್ನಾರವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು ತಾಕೀತು ಮಾಡಲು ಜೆಡಿಎಸ್ ಗೆ ಎಚ್.ಕೆ ಕುಮಾರಸ್ವಾಮಿ ಹಾಗೂ ಚಂಚಲ ಕುಮಾರಸ್ವಾಮಿ ಕೈ ಕಮಾಂಡ್ ಆಗಿದ್ದಾರೆಯೇ.? ಎಂದು ಪ್ರಶ್ನಿಸಿದ್ದಾರೆ.

ಅಕ್ಷತಾ ಆರೋಪಕ್ಕೆ ಚಂಚಲ ಕುಮಾರಸ್ವಾಮಿ ಸ್ಪಷ್ಟನೆ:

 ಕಾರ್ಯಕ್ರಮಕ್ಕೆ ಯಾರನ್ನು ಬಾರದಂತೆ ತಡೆಯುವ ಕೆಲಸವನ್ನು ನಾನು ಮಾಡಿಲ್ಲ, ಅಕ್ಷತಾ ಅವರು ಮಾಡುತ್ತಿರುವ ಆರೋಪಕ್ಕೆ ಸಾಕ್ಷಿ ಇದ್ದರೆ ತೋರಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆದು ಕಾರ್ಯಕರ್ತರಿಗೆ ಗೊಂದಲ ಉಂಟು ಮಾಡುವ ಕೆಲಸ ಮಾಡಬಾರದು. ಈಗಾಗಲೇ ಈ ವಿಚಾರವಾಗಿ ಅಕ್ಷತಾ ಅವರ ಪತಿ ಪ್ರೀತಂ ಜೊತೆ ಮಾತನಾಡಿದ್ದೇನೆ ಯಾವುದೇ ಗೊಂದಲವಿಲ್ಲ. ಬೃಹತ್ ಕಾರ್ಯಕ್ರಮದಲ್ಲಿ  ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮ ಆಯೋಜನೆ ಮಾಡಿದರೆ ಗೊಂದಲವಾಗುತ್ತದೆ ಎಂಬ ಕಾರಣಕ್ಕೆ ಮುಂದಿನ ದಿನಗಳಲ್ಲಿ  ನಡೆಯುವ ಕಾರ್ಯಕ್ರಮದಲ್ಲಿ ರೇವಣ್ಣನವರ ಸಮ್ಮುಖದಲ್ಲಿ  ಪಕ್ಷ ಸೇರ್ಪಡೆಗೊಳ್ಳುವ ಕಾರ್ಯಕರ್ತರಿಗೆ ಕಾರ್ಯಕ್ರಮ ಆಯೋಜಿಸೋಣ ಎಂದು ಹೇಳಿದ್ದೇನೆ.. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಅಕ್ಷತಾ ಅವರು ವಿನಾಕಾರಣ ನನ್ನ ಮೇಲೆ  ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ 

RELATED ARTICLES
- Advertisment -spot_img

Most Popular