ಹಸಿರು ಯೋಧ ಸುಂದರೇಶ್ ರವರ ಹೆಸರು ಸಕಲೇಶಪುರ ಉದ್ಯಾನ ವನಕ್ಕೆ ಇಡಬೇಕೆಂದು ಆಗ್ರಹ.
ಕಳೆದ ತಿಂಗಳು ಫೆಬ್ರವರಿ 16 ರಂದು ಕಾಡ್ಗಿಚ್ಚಿನ ಅಗ್ನಿ ದುರಂತ ಸಕಲೇಶಪುರದ ಜನತೆಯನ್ನೇ ನಿಬ್ಬೆರಗಾಗುವಂತೆ ಮಾಡಿತ್ತು ಕಾರಣ ಕಾಡ್ಗಿಚ್ಚು ನಂದಿಸಲು ಹೋದ ಅರಣ್ಯಾಧಿಕಾರಿಗಳ ತಂಡ ಬೆಂಕಿಯಲ್ಲಿ ಸಿಲುಕಿ ಬೆಂದು ಹೋಗಿದ್ದರು. ದುರದೃಷ್ಟವಶಾತ್ ಅರಣ್ಯ ಪಾಲಕ ಸುಂದರೇಶ್ ರವರು ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಬಲಿಯಾದರು. ಕಾಡ್ಗಿಚ್ಚು ನಂದಿಸಲು ಹೋಗಿ ವಿಧಿಯ ಆಟಕ್ಕೆ ಬಲಿಯಾದ ದಿವಂಗತ ಹಸಿರು ಯೋಧ *ಸುಂದರೇಶ್* ರವರ ಹೆಸರನ್ನು ನಮ್ಮ ಸಕಲೇಶಪುರ ಚಂಪಕನಗರ ಬಡಾವಣೆಯ ಉದ್ಯಾನವನಕ್ಕೆ ನಾಮಕರಣ ಮಾಡಬೇಕು. ಮತ್ತು ಉದ್ಯಾನವನವನ್ನು ಪಾದಚಾರಿಗಳಿಗೆ , ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಮಾಡಿಕೊಡಬೇಕೆಂದು ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆ, ರಾಜ್ಯ ಉಪಾಧ್ಯಕ್ಷರು ದರ್ಶನ್ ಪೂಜಾರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಜಿತ್ ಕುಮಾರ್, ರಾಜ್ಯ ಯುವಘಟಕ ಅಧ್ಯಕ್ಷ ಕೃತಿ ವರ್ಮ, ತೇಜೇಶ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು.