ಜೇನುನೊಣಗಳ ದಾಳಿಗೆ ರೈತ ಬಲಿ
ಸಕಲೇಶಪುರ : ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ರೈತರೊಬ್ಬರಿಗೆ ಜೇನುನೊಣಗಳು ದಾಳಿ ಮಾಡಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ.
ಅತ್ತಿಗನಹಳ್ಳಿ ಗ್ರಾಮದ ನಾಗೇಶ್ (65)ಎಂಬುವರು ಎಂದಿನಂತೆ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದರು ಈ ವೇಳೆ ಏಕಾಏಕಿ ಜೇನುನೊಣಗಳು ನಾಗೇಶ್ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ನಾಗೇಶ್ ರವರನ್ನು ಗ್ರಾಮಸ್ಥರು ಹೆತ್ತೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.