ಸಕಲೇಶಪುರ ಜನತೆಯ ಅಪಾರ ಪ್ರೀತಿ ವಿಶ್ವಾಸಗಳಿಸಿರುವ ಬಹುದೊಡ್ಡ ಮಾನವೀಯ ಸಂಪತ್ತು “ಚೆನ್ನವೇಣಿ ಎಂ ಶೆಟ್ಟಿ”.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಹಿತಿ ಯಡೇಹಳ್ಳಿ ಆರ್ ಮಂಜುನಾಥ್ ರವರ ವಿಶೇಷ ಲೇಖನ
ಎಲ್ಲವೂ ಇದ್ದರು ಈಕೆ “ನಿಗರ್ವಿ” ಎಲ್ಲರೊಂದಿಗೂ ಸಮಾನ ಭಾವದಿಂದ ನಡೆದುಕೊಳ್ಳುವ,ನಗುಮೊಗದಿಂದ ಮಾತನಾಡಿಸುವ ಇವರ ಗುಣವನ್ನು ಎಲ್ಲರೂ ಮೆಚ್ಚುವಂತಹುದೇ, ಬಡವ – ಬಲ್ಲಿದರೆಂಬ ತಾರತಮ್ಯವಿಲ್ಲ ತೋರುವ ಆವರ ಆತಿಥ್ಯಗಳು, ಇಂತಹ ಗುಣಗಳು ಎಲ್ಲರಿಗೂ ಬರಲು ಸಾಧ್ಯವಿಲ್ಲ.
ಕೊಡುಗೈ ದಾನಿ, ಸೌಂದರ್ಯೋಪಾಸಕಿ, ಶಿವಶರಣೆ, ಸೇವಾಕರ್ತ, ನೊಂದವರಿಗೆ ಮಹಾತಾಯಿ, ಜನ ಸಂಘಟಕಿ, ಬುದ್ಧಿ ಜೀವಿ, ಸಮಾಜ ಸೇವಕಿ, ವಿದ್ಯಾ ಪಕ್ಷಪಾತಿ, ಸದಾ ಹಸನ್ಮುಖಿ, ನಿಗರ್ವಿ- ಸಕಲಗುಣ ಸಂಪನ್ನೆ, ಗುಣಗಳ ಆಗರ, ಯಾರೀಕೆ? ತಿಳಿಯೋಣ ಬನ್ನಿ…
ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಬೇವು ಬೆಲ್ಲವಾಗಿ ಬಾಳನ್ನು ಸ್ವೀಕರಿಸಬೇಕೆಂಬ ಉಕ್ತಿಗೆ ಕಣ್ಮುಂದೆ ಇರುವ ಉದಾಹರಣೆ ಚನ್ನವೇಣಿ ಎಂ ಶೆಟ್ಟಿ ಬದುಕು.ಸಿರಿವಂತಿಕೆಯ ಸಂಪತ್ತಿಗೆಯ ನಡುವೆಯೂ ಬದುಕಿನ ಪ್ರೀತಿ, ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿರುವ ಚಣ್ಣವೇನಿ,ಮಹಿಳೆಯರಿಗಷ್ಟೆ ಅಲ್ಲ ಇಡೀ ಸಮಾಜಕ್ಕೆ ಆದರ್ಶ.ಸಾಂಪ್ರದಾಯಿಕ, ಪಾರಂಪರಿಕ, ಪಾಕೃತಿಕ ಕಾರಣಗಳಿಂದ ಅವಕಾಶ ವಂಚಿತಳಾದ ಮಹಿಳೆಯರು ಜಾಗೃತರಾಗಬೇಕು,ಸಂಘಟಿತರಾಗಬೇಕು, ಅಗತ್ಯವಿದ್ದಾಗ ಬೀದಿಗಿಳಿದು ಹೋರಾಡಲೂಬೇಕು. ತೊಟ್ಟಿಲು ತೂಗುವ ಕೈಗಳು ಆಡಳಿತವನ್ನು ನಡೆಸಬೇಕೆಂಬ ಸಾಮಾಜಿಕ ಬದಲಾವಣೆಗೆ ಮಹಿಳಾ ಜಾಗೃತಿ – ಸಾಮರಸ್ಯದೊಂದಿಗೆ ಪ್ರಯತ್ನಿಸಿದ ಈ ಕಾಲಘಟ್ಟದಲ್ಲಿ ನಿಲ್ಲಬಹುದಾದವರ ಗುಂಪಿನಲ್ಲಿ ನಮ್ಮೂರಿನ ಚನ್ನವೇಣಿ ಎಂ ಶೆಟ್ಟಿ ಸಹ ಒಬ್ಬರೆಂದು ಹೇಳಲು ಹೆಮ್ಮೆಯಾಗುತ್ತದೆ.
ಚಿಕ್ಕಂದಿನಿಂದಲೂ ಹುಟ್ಟಿದ ಮನೆ, ಸೇರಿದ ಮನೆಗಳಿಗೆ ಕೀರ್ತಿ ತಂದವರು ಈಕೆ ಬಂಟ್ವಾಳದ ಬೆಳ್ಳಿಪ್ಪಾಡಿ ಮನೆತನ ದಾನಕ್ಕೆ ಸಮಾಜಸೇವೆ ಗೆ ರಾಜಕೀಯಕ್ಕೆ ಹೆಸರಾದ ಮನೆತನಕ್ಕೆ ಸೇರಿದವರು, ಬಂಟ್ವಾಳದ ಬೇಬಿಯಣ್ಣ ಜನನಾಯಕ ಮಾಜಿ ಸಚಿವ ರಮಾನಾಥ ರೈ ರವರ ಅಕ್ಕ.ಅಂತಹ ಕುಟಂಬದ ಹೆಣ್ಣು ಮಗಳು. ದಿವಂಗತ ಪೆರ್ನೇ ನಾರಾಯಣ ರೈ ದಿವಂಗತ ಗಿರಿಜಾ ರೈ ದಂಪತಿಗಳ ಪುತ್ರಿಯಾಗಿ 25-12-1950 ರಂದು ಪೆರ್ನೆ ಗ್ರಾಮದಲ್ಲಿ ಜನಿಸಿದರು.ಒಂದರಿಂದ ನಾಲ್ಕನೇ ತರಗತಿಯನ್ನು ಪೆರ್ನೆ ಗ್ರಾಮದಲ್ಲಿ ಮುಗಿಸಿ,5 ರಿಂದ 10 ನೇ ತರಗತಿಯನ್ನು ಬಂಟ್ವಾಳದ ಕಾನ್ವೆಂಟ್ ಅಲ್ಲಿ ಪೂರ್ಣಗೊಳಿಸಿದರು.
ನಂತರ 26- 04-19 71 ರಲ್ಲಿ ಸಕಲೇಶಪುರದ ಕೆನರಾ ಕ್ಲಿನಿಕ್ ನ ಪ್ರಸಿದ್ದ ವೈದ್ಯರಾದ ಕಾರ್ಕಳ ಮೂಲದ ಶ್ರೀ ಮೋಹನ್ ದಾಸ್ ಶೆಟ್ಟಿ ಕೈ ಹಿಡಿದು ಜೀವನ ಸಾರ್ಥಕ ಮಾಡಿಕೊಂಡ ಮಮತಾಮಯಿ ಈಕೆ.ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊಂಡು ಹುಟ್ಟಿ, ಬಂಗಾರದ ಮನೆ ಸೇರಿದ ಚನ್ನವೇಣಿಯವರು, ಸಿರಿವಂತ ಕುಟುಂಬದಲ್ಲಿ ತಮ್ಮಷ್ಟಕ್ಕೆ ತಾವೇ ಕಾಲಕಳೆಯಬಹುದಾದ ಅವಕಾಶ ಹೊಂದಿದ್ದರು, ಆದರೆ ತಾವು ನಕ್ಕರಷ್ಟೆ ಸಾಲದು, ಸುತ್ತಲಿನ ಸಮಾಜ ನಗಬೇಕೆಂಬ ಮಾನವೀಯ ಕಾಳಜಿಯೂ ಚನ್ನವೇಣಿಯವರಲ್ಲಿ ಪ್ರತಿಬಿಂಬಿತವಾಯಿತು.
ಭೂತ – ವರ್ತಮಾನಗಳಲ್ಲಿ ಇವರ ಬಳಿಗೆ ಹೋದ ಯಾರೂ ಬರಿಗೈಯಲ್ಲಿ ಹಿಂದಿರುಗಿ ಬರಲಿಲ್ಲ.ಬರುವುದೂ ಇಲ್ಲ. ಸಕಲೇಶಪುರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳಿಗೆ ದಾನಿಯಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ಕೂಡ ಭಾಗಬಹಿಸುವಿಕೆಯನ್ನು ನಾವೆಲ್ಲ ಕಂಡಿದ್ದೇವೆ.ಮೂರು ಮಕ್ಕಳ ತಾಯಿಯಾದ ಈಕೆ ‘ಮಹಾತಾಯಿ”ರೂಪು, ಐಶ್ವರ್ಯ ಒಂದೆಡೆ ಸೇರುವುದು ಅಪರೂಪ. ಲಕ್ಷ್ಮಿ- ಸರಸ್ವತಿಯರು ಇವರ ಜೊತೆಯಲ್ಲಿಯೇ ಇರುವರೇನೋ ಎನ್ನಿಸುತ್ತದೆ. ಪತಿಗೆ ತಕ್ಕ ಸತಿ ಹೇಳಿ ಮಾಡಿಸಿದ ದಂಪತಿಗಳು. ಈಕೆ ಸೌಂದರ್ಯೋಪಾಸಕಿ. “ಇಟ್ಟರೆ ತೊಟ್ಟರೆ ಪುಟ್ಟಕ್ಕನೂ ಚಂದ” ಎನ್ನುವ ಗಾದೆ ಮಾತಿನಂತೆ ಈಕೆಯ ಶೃಂಗಾರ, ಈಕೆಯ ನಗು ಆಕಾಶ – ನಕ್ಷತ್ರಗಳಂತೆ ಎಣಿಸಲು ಸಾಧ್ಯವಿಲ್ಲ. ಇವರ
ಆಸಕ್ತಿಯೂ ಮೆಚ್ಚುವಂತಹುದೇ.
ಸಮಾಜ ಸೇವಾಕರ್ತೆ ಎಂಬ ಮಾತು ಇವರಿಗೆ ಒಪ್ಪುವಂತಹುದೆ. ನನ್ನ ನೆನಪಿನಂಗಳದಿಂದ ಇವರ ಸಮಾಜ ಸೇವೆಯನ್ನು ಹೆಕ್ಕಿ ತೆಗೆದಾಗ ಕಾಣುತ್ತದೆ. ಇವರ ಸೇವಾ ಚಟುವಟಿಕೆಗಳು ನಾ ಮುಂದು ತಾ ಮುಂದು ಎಂದು ಹೊರ ಚೆಲ್ಲುತ್ತವೆ.ಮಹಿಳೆಯರನ್ನು ಜಾಗೃತಗೊಳಿಸಲು, ಸಮಾಜ ಸೇವೆಯಲ್ಲಿ ತೊಡಗಲು ಬೇಕಾದ ಒಂದು ವೇದಿಕೆಯಲ್ಲಿ ತಾವೇ ರೂಪಿಸಿದರು. 1975 ” ನಂಜಮ್ಮ ಮಹಿಳಾ ಸಮಾಜ” ಸಂಘದ ಅದ್ಯಕ್ಷರಾಗಿ 20 ವರ್ಷಗಳಲ್ಲಿ ಹಮ್ಮಿಕೊಂಡ ಸೇವಾ ಕಾರ್ಯಗಳು ಒಂದೇ ಎರಡೇ – ಮಹಿಳೆಯರನ್ನು ಪ್ರೋತ್ಸಾಹಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಿಸಿ ವೇದಿಕೆ ಕಲ್ಪಿಸಿ ಕೊಟ್ಟರು. ಮಹಿಳೆಯರ ಸಮಸ್ಯೆ ಬಗ್ಗೆ ಉಪನ್ಯಾಸಗಳು ವೈದ್ಯಕೀಯ ಸಲಹೆಗಳು ಕೌಟುಂಬಿಕ ಸಲಹೆಗಳ ಕಾರ್ಯಕ್ರಮಗಳನ್ನ ಆಯೋಜಿಸಿ ಜಾಗೃತಿ ಮೂಡಿಸಿದರು, ಹಲವಾರು ಮಹಿಳಾ ಖ್ಯಾತ ಮಹನೀಯರನ್ನು ಕರೆಸಿ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳು ಹತ್ತಾರು ನಡೆಸಿ ಮಹಿಳಾ ಆತ್ಮಸ್ಥೈರ್ಯ ತುಂಬ ಕೆಲಸವನ್ನು ಮಾಡಿದರು. ಎಲ್ಲ ಕಾರ್ಯಗಳಿಗೆ ನಂಜಮ್ಮ ಮಹಿಳಾ ಸಮಾಜದ ಕಾರ್ಯಕಾರಿ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರುಗಳು ಸಾರ್ವಜನಿಕರು ಕೈಜೋಡಿಸಿ ಇಂದು ಕೂಡ ನಂಜುಮ ಮಹಿಳಾ ಸಮಾಜ ಸಂಘಟನೆ ಸದೃಢವಾಗಿ ನೆಲೆ ನಿಂತು ಕಾರ್ಯ ನಿರ್ವಹಿಸುತ್ತಿದೆ.
1992ರಿಂದ 13 ವರ್ಷಗಳ ಕಾಲ ಸಕಲೇಶಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿದರು. ಉದಯೋನ್ಮುಖ ಸಕಲೇಶಪುರ ತಾಲೂಕಿನ ಕವಿಗಳು ಮತ್ತು ಬರಹಗಾರನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸುವ ಸಲುವಾಗಿ ಕವಿಗೋಷ್ಠಿಗಳನ್ನು ನಡೆಸಿದ್ದಾರೆ.ವಿಶೇಷವಾಗಿ ವಚನ ಸಾಹಿತ್ಯ ಸಂಗಮ ಕಾರ್ಯಕ್ರಮವನ್ನು ಕೂಡ ನಡೆಸಿ ಅಕ್ಕಮಹಾದೇವಿ ಬಸವಣ್ಣನವರ ವಚನಗಳ ಸಾರ ಧಾರ್ಮಿಕ ವಿಚಾರ ಲಹರಿಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ.ಜೊತೆಗೆ ಕನ್ನಡ ಕವಿಗಳ ಪರಿಚಯ ಮಾಲಿಕೆಯಲ್ಲಿ ಅನೇಕ ಕವಿಗಳ ಕಿರುಪರಿಚಯ ಸ್ಪರ್ಧೆ ಹಮ್ಮಿಕೊಂಡು ಹಲವಾರು ಹಿರಿಯ ಕವಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮ ಮಾಡಿದ್ದಾರೆ. ಕವಿ ಕಮ್ಮಟ ಕಾರ್ಯಕ್ರಮವನ್ನು ಏರ್ಪಡಿಸಿ 30ಕ್ಕೂ ಹೆಚ್ಚು ಉದಯೋನ್ಮುಖ ಕವಿಗಳು ಪಾಲ್ಗೊಂಡು ಚರ್ಚೆ ಚಿಂತನ ಮಂಥನಗಳು ನಡೆದು ಹಲವಾರು ಗ್ರಾಮೀಣ ಭಾಗದ ಯುವ ಪ್ರತಿಭೆಗಳು ಹೊರಬರಲು ಕಾರಣವಾಯಿತು. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆಗಳು,ಕಂಠಪಾಠ ಸ್ಪರ್ದೆಗಳು,ಚರ್ಚಾ ಸ್ಪರ್ಧೆಗಳು, ಜಾನಪದ ಗೀತೆ,ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಏರ್ಪಡಿಸಿ ಪ್ರೋತ್ಸಾಹಿಸಿದ ನೂರಾರು ಉದಾಹರಣೆಗಳಿವೆ. ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬಿ ಎ ಜಗನ್ನಾಥ್ ಮತ್ತು ಓಬಳೇಶ್ ಗಟ್ಟಿ,ಚಂದ್ರಶೇಖರ್ ದೂಲೇಕರ್,ಶ್ರೀಮತಿ ಶಾರದಾ ಗುರುಮೂರ್ತಿ, ಹೆಚ್ ಎ ಪುಟ್ಟಸ್ವಾಮಿ, ಎಸ್ ಕೆ ವಿಜಯಕುಮಾರ್, ಬಿ ವಿ ಜಯರಾಜ್,ಎಸ್ ಎ ರಂಗೇಗೌಡ, ಕೆ ಡಿ ದಿವಾಕರ್, ಮಾ ಸಕಲೇಶ ಇನ್ನು ಹಲವಾರು ಸಕಲೇಶಪುರದ ಮಹನೀಯರ ಜೊತೆ ಸೇರಿ 1994 ರಲ್ಲಿ ಹಾಸನ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ ಯಶಸ್ವಿಯಾದರು ನಾಡಿನ ಎಲ್ಲಾ ಖ್ಯಾತ ರಾಜಕಾರಣಿಗಳು, ಪ್ರಸಿದ್ಧ ಸಾಹಿತಿಗಳು, ಕವಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು ಇತಿಹಾಸವಾಗಿದೆ. ಈ ಸುಂದರ ಸಾಹಿತ್ಯ ಸಮ್ಮೇಳನವನ್ನು ನಿರೂಪಿಸಿದ ಹೆಗ್ಗಳಿಕೆಯಾಗಿ ಅಂದಿನ ಮುಖ್ಯಮಂತ್ರಿಗಳಾದ ವೀರಪ್ಪ ಮೊಹಿಲಿ ಅವರು “ಸ್ತ್ರೀರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ರೋಟರಿ ಇನ್ನರ್ವಿಲ್ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ರೋಟರಿ ಸಂಸ್ಥೆಯಲ್ಲಿ ತೊಡಗಿಸಿಕೊಂಡು ನೂರಾರು ಸಮಾಜ ಸೇವ ಕಾರ್ಯಗಳಲ್ಲಿ ನೆರವೇರಿವಲ್ಲಿ ಕೈಜೋಡಿಸಿದ್ದರು.
ಸಂತ ಜೋಶರ ಶಾಲೆಯಲ್ಲಿ ಸಂಸ್ಥೆಯ ಕಾರ್ಯಕ್ರಮ ಮಂಡಳಿಯಲ್ಲಿ ಕೆಲಸ ನಿರ್ವಹಿಸಿದರು, ಕರ್ನಾಟಕದ ಹೆಮ್ಮೆಯ ಕೇಂದ್ರ ಸರ್ಕಾರದ ರೈಲ್ವೆ ಸಚಿವರಾದ ಜಾಫರ್ ಷರೀಫ್ ರವರು ಮೂರು ವರ್ಷಗಳ ಕಾಲ ರೈಲ್ವೆ ಸಮಿತಿಯಲ್ಲಿ ಸದಸ್ಯರನ್ನಾಗಿ ಆಯ್ಕೆ ಮಾಡಿ ಇವರಿಗೆ ಗೌರವ ನೀಡಿದರು. ಜೊತೆಗೆ ಬಂಟರ ಸಂಘದ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಮುನ್ನಡೆಸಿ ಮಹಿಳಾ ಸಂಘಟನೆ ಬಲಗೊಳಿಸಿದರು, ಜೊತೆಗೆ ಸ್ವತಹ ಕಾಫಿ ಬೆಳೆಗಾರರಾಗಿರುವ ಚನ್ನವೇಣಿ ಎಂ ಶೆಟ್ಟಿ ಅವರು ಸಕಲೇಶಪುರದ ಡಬ್ಲ್ಯೂ ಪಿ ಸಿ ವುಮೆನ್ಸ್ ಕಾಫಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಸಂಘಟನೆಯ ಸದಸ್ಯರೊಟ್ಟಿಗೆ ಸೇರಿ ಕಾಫಿ ಬೆಳೆಯಲ್ಲಿ ಮಹಿಳೆಯರ ಪಾತ್ರವನ್ನು ಪರಿಚಯಿಸಿ ಕಾಫಿ ಬೆಳೆ ಮಾರಾಟ ಹಾಗೂ ಉಪಯೋಗಿಸುವ ಬಗ್ಗೆ ಅರಿವು ಮೂಡಿಸಿದರು.
ಚೆನ್ನವೇಣಿ ಎಂ ಶೆಟ್ಟಿ ಅವರ ಅಷ್ಟು ಸಾಮಾಜಿಕ ಚಟುವಟಿಕೆಗಳು ಪತಿಯ ಸಹಕಾರ ಅಮೋಘವಾದದ್ದು ಈ ಅನ್ಯೂನ್ಯ ದಂಪತಿಗಳಿಗೆ ಡಾ. ಸೋಹನ್ ದಾಸ್ ಶೆಟ್ಟಿ ಎಂಬ ಮಗನಿದ್ದು ಖ್ಯಾತ ಚರ್ಮರೋಗ ತಜ್ಞರಾಗಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮಗಳು ಸೌಂದರ್ಯ ಅತ್ಯುತ್ತಮ ಕಲೆಗಾರ್ತಿಯಾಗಿ ಇಂಟೀರಿಯರ್ ವಿನ್ಯಾಸಗಾರ್ತಿಯಾಗಿ ಪ್ರಸಿದ್ಧರಾಗಿ ಡಾಕ್ಟರ್ ಸಂದೀಪ್ ಹೆಗ್ಡೆ ಎನ್ನುವ ಎನ್ನಪೋಯ ಕಾಲೇಜಿನ ಪ್ರೊಫೆಸರ್ ಅವರೊಂದಿಗೆ ವಿವಾಹವಾಗಿ ಸುಂದರ ಕುಟುಂಬ ಜೀವನ ನಡೆಸುತ್ತಿದ್ದಾರೆ ಮತ್ತೊಬ್ಬಳು ಸೌಜನ್ಯ ಆಳ್ವರವರು ಕಾರ್ ಡಾಟ್ ಕಾಂ ಕಂಪನಿಯ ಮುಖ್ಯಸ್ಥ ವಿಕ್ರಂ ಆಳ್ವಾರೊಂದಿಗೆ ವಿವಾಹವಾಗಿ ಬಾಂಬೆಯಲ್ಲಿ ನೆಲೆಸಿದ್ದಾರೆ.
ಸಕಲೇಶಪುರದ ಯಾವುದೇ ಸಾಂಸ್ಕೃತಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸದಾ ಹಸನ್ಮುಖಿಯಾಗಿ ಸಮಯಕ್ಕೆ ಸರಿಯಾಗಿ ಭಾಗವಹಿಸಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ಗುಣ ಸರ್ವರಿಗೂ ಮೆಚ್ಚುಗೆಯಾದಂತದ್ದು. ಸಕಲೇಶಪುರದಲ್ಲಿ ಚೆನ್ನವೀರಮ್ಮ ಇಲ್ಲದೆ ನಡೆದಿರುವ ಕಾರ್ಯಕ್ರಮಗಳಿಗೆ ಇಲ್ಲ ಈ ತಾಲೂಕಿನ ಜನಮನದ ಮೇಲೆ ತುಂಬಾ ಪ್ರಭಾವ ಬೀರುವ ಬೀರಿರುವ ವ್ಯಕ್ತಿ ಜನವೇ ನಿಯಮಿಯಂ ಶೆಟ್ಟಿ ಅವರು ಅವರ ಈಗಿನ ತಪೋ ಜೀವನ ಅವಧಾರಿಯ ಶುಭ ಚರಿತಗಳು ಮುಂದಿನ ಜನಾಂಗಕ್ಕೆ ಒಂದು ಮಾದರಿ ದಾನದಲ್ಲಿ ಅಭಿಮಾನದಲ್ಲಿ ಈ ಮಾನಿನಿಗೆ ಹೇಳಿಲ್ಲ ಈ ಪುಣ್ಯಭೂಮಿ ಹೋಮಿಸಿರುವ ಒಂದು ಸುಂದರ ಹೂ ಶ್ರೀಮತಿ ಚೆನ್ನವೇಣಿ ಎಂ ಶೆಟ್ಟಿರವರು. ನೂರಾರು ಕಾಲ ಇವರ ಮಾರ್ಗದರ್ಶನ ನಮ್ಮೆಲ್ಲರಿಗೂ ಕೂಡ ದಾರಿದೀಪವಾಗಲಿ ಎಂದು ಆಶಿಸೋಣ ಈ ಆದರ್ಶ ದಂಪತಿಗಳು ನೂರು ಕಾಲ ನಮ್ಮ ನಿಮ್ಮ ನಡುವೆ ಬದುಕಿ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.
*ಕಸದಿಂದ ರಸ ಮಾಡುವ ಕಲೆ ಇವರದು.*
ಆಲಸ್ಯ, ಸೋಮಾರಿತನದಿಂದ ಬಹಳ ದೂರ.ಹಿಡಿದ ಕೆಲಸವನ್ನು ಪೂರ್ಣಗೊಳಿಸುವುದು ಸಂದರ್ಭೋಚಿತವಾಗಿ ಶ್ರದ್ಧಾಶಕ್ತಿಗಳಿಂದ ಮಾಡುವುದು,ಹುಟ್ಟಿದ ಹಾಗೂ ಸೇರಿದ ಕುಟುಂಬದ ಪಾರಂಪರಿಕ ವಸ್ತುಗಳನ್ನು ಸಂಸ್ಕೃತಿಯ ಬೆಳಕನ್ನು ಮುಂದಿನ ಜನಾಂಗಕ್ಕೆ ದಾಟಿಸುವುದು,ಅವುಗಳನ್ನು ಜತನದಿಂದ ಪೋಷಿಸುವುದು, ಎಲ್ಲಾ ವಸ್ತುಗಳನ್ನೂ
ಕಾಪಾಡುತ್ತಾ ಜೀವನದ ಮೌಲ್ಯ ಇದರಲ್ಲಿಯೇ ಅಡಗಿದೆ ಎಂಬ ಸತ್ಯವನ್ನು ಕಿರಿಯವರಿಗೆ ತೋರಿಸಿಕೊಡಬೇಕೆಂದು ಅವರ ಆಶಯ. ಮನೆಗೆ ಓಮ್ಮೆ ಬೇಟಿ ನೀಡಿದರೆ ಕಾಲ ಸಂಗ್ರಹಾಲಯ ತೆರೆದುಕೊಳ್ಳುತ್ತದೆ.
*ಸೇವೆಗೆ ಸಂದ ಗೌರವಗಳು.*
* 1994ರಲ್ಲಿಈ ಸಕಲೇಶಪುರದಲ್ಲಿ ಸುಂದರ ಸಾಹಿತ್ಯ ಸಮ್ಮೇಳನವನ್ನು ನಿರೂಪಿಸಿದ ಹೆಗ್ಗಳಿಕೆಯಾಗಿ ಅಂದಿನ ಮುಖ್ಯಮಂತ್ರಿಗಳಾದ ವೀರಪ್ಪ ಮೊಹಿಲಿ ಅವರು “ಸ್ತ್ರೀರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
* 2005 ನೇ ಇಸ್ವಿಯಲ್ಲಿ ಹಾಸನ ಜಿಲ್ಲಾ ವಚನ ಸಾಹಿತ್ಯ ಅಕಾಡೆಮಿ ಹಾಗೂ ರಂಗ ಸಮಾಜ ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಚನ್ನರಾಯಪಟ್ಟಣದಲ್ಲಿ ನಡೆದ ಪ್ರಥಮ ವಚನ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಶಿರೋಮಣಿ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
* 2009 ನೇ ಇಸವಿಯಲ್ಲಿ ಶ್ರೀ ಹೊಳೆಮಲ್ಲೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಮಲೆನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
* 2011 ನೇ ಇಸವಿಯಲ್ಲಿ ಹಾಸನ ಜಿಲ್ಲಾ ಸಾಹಿತ್ಯ ಸಾಹಿತ್ಯ ಪರಿಷತ್ ವತಿಯಿಂದ 12ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
* ಸಕಲೇಶಪುರ ಆಡಳಿತ ವರ್ಗದಿಂದ ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಇನ್ನಿತರ ಕಾರ್ಯಕ್ರಮಗಳಲ್ಲಿ ಗೌರವಿಸಿ ಸನ್ಮಾನಿಸಲಾಗಿದೆ.
ಯಡೇಹಳ್ಳಿ”ಆರ್”ಮಂಜುನಾಥ್.
9901606220