ಸಕಲೇಶಪುರ ತಾಲೂಕು ಬಲಿಜ ಸಂಘದಿಂದ ಕೈವಾರ ತಾತಯ್ಯ ಜಯಂತೋತ್ಸವ.
ಸಕಲೇಶಪುರ : ಕೈವಾರ ತಾತಯ್ಯ ಜಯಂತೋತ್ಸವವನ್ನು ತಾಲೂಕು ಬಲಿಜ ಸಂಘ, ತಾಲೂಕು ಆಡಳಿತದ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ರಾಜ ಬೀದಿಯಲ್ಲಿ ಕೈವಾರ ತಾತಯ್ಯನವರ ಭಾವಚಿತ್ರದ ಮೆರವಣಿಗೆ ನಡೆಸಿ ಪುರ ಭವನದಲ್ಲಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಈ ಸಂಧರ್ಭದಲ್ಲಿ ಬಲಿಜ ಸಂಘದ ತಾಲೂಕು ಅಧ್ಯಕ್ಷರಾದ ಸತೀಶ್, ಜಿಪಂ ಮಾಜಿ ಉಪಾಧ್ಯಕ್ಷ ಪಲ್ಲವಿ ಶ್ರೀನಿವಾಸ್, ಪುರಸಭ ಸದಸ್ಯರಾದ ಮೋಹನ್, ಸಮಾಜದ, ಮುಖಂಡರಾದ ಬಿರಿಯಾನಿ ರವಿ, ಲೋಕೇಶ್, ಅಣ್ಣಪ್ಪ ಸರ್,ಯತೀಶ್ ಸೇರಿದಂತೆ ಇನ್ನಿತರರು ಇದ್ದರು