ಸಕಲೇಶಪುರ : ಆಸ್ಪತ್ರೆಗೆ ಹೋಗಿ ಬರುವುದರೊಳಗೆ ಕಾರಿನಲ್ಲಿದ್ದ 2 ಲಕ್ಷ ಲಪಟಾಯಿಸಿದ ಖದೀಮರು
ಸಕಲೇಶಪುರ : ತಾಲೂಕಿನ ಹಾರ್ಲೆ ಕೂಡಿಗೆಯ ಅನ್ನಪೂರ್ಣೇಶ್ವರಿ ಪ್ಲಾಂಟೇಶನ್ ಸತೀಶ್ ಅವರು ಕೆನರಾ ಬ್ಯಾಂಕಿನಿಂದ 2 ಲಕ್ಷ ಹಣ ಡ್ರಾಮಾಡಿ, ಕಾರಿನ ಒಳಗೆ ಇಟ್ಟು, ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲ ಕದೀಮರು ಕಾರಿನ ಎಡಬಾಗದ ಡೋರಿನ ಗ್ಲಾಸನ್ನು ಹೊಡೆದು. ಬ್ಯಾಗಿನಲ್ಲಿಟ್ಟದ್ದ ಹಣದ ಸಮೇತ ದಾಖಲೆಪತ್ರಗಳನ್ನು ಕದ್ದು ತೆಗೆದುಕೊಂಡು ಪರಾರಿಯಾಗಿರುವ ಘಟನೆ ಜರುಗಿದೆ.
ಮಂಗಳವಾರ ಬೆಳಗ್ಗೆ 11:35 ಗಂಟೆ ಸಮಯದಲ್ಲಿ ತುರ್ತು ಅಗತ್ಯತೆಗಾಗಿ ಹಣದ ಅವಶ್ಯಕತೆ ಇದ್ದಿದ್ದರಿಂದ ಸತೀಶ್ ಅವರು ತಮ್ಮ ಹುಂಡೈ ಐ20 ಕಾರಿನ ನಂ.ಕೆಎ46-ಎಂ-1510 ರ ವಾಹನದಲ್ಲಿ ಬಂದು ಸಕಲೇಶಪುರದ ಕೆನರಾಬ್ಯಾಂಕ್ ಶಾಖೆಗೆ ಹೋಗಿ, 2 ಲಕ್ಷ ರೂಪಾಯಿಗಳನ್ನು ಡ್ರಾಮಾಡಿಕೊಂಡು, ಕಾರಿನ ಒಳಗೆ ಇಟ್ಟುಕೊಂಡು, ಸಕಲೇಶಪುರ ಟೌನ್, ಬಿ.ಎಂ.ರಸ್ತೆಯ, ಮಣಪ್ಪುರಂ ಗೋಲ್ಡ್‌ನ ಬಿಲ್ಡಿಂಗ್‌ನಲ್ಲಿರುವ ಪ್ರಣತಿ ಮೆಡಿಕಲ್ಸ್ ಮುಂಭಾಗದ ರಸ್ತೆಯ ಎಡಬದಿಯಲ್ಲಿ ಕಾರನ್ನು ನಿಲ್ಲಿಸಿ, ಹಲ್ಲು ನೋವಿಗೆ ಚಿಕಿತ್ಸೆ ಪಡೆದು, 10 ನಿಮಿಷದ ಒಳಗಾಗಿ ಅಂದರೆ ಮಧ್ಯಾಹ್ನ ಸುಮಾರು 12:00 ಗಂಟೆಯ ಸಮಯದಲ್ಲಿ ಕಾರಿನ ಬಳಿಗೆ ವಾಪಾಸ್ ಬಂದು ನೋಡಿದಾಗ ಯಾರೋ ಕಿಡಿಗೇಡಿಗಳು ಕಾರಿನ ಎಡಭಾಗದ ಮುಂದಿನ ಡೋರ್ ಕ್ಲಾಸನ್ನು ಪುಡಿಮಾಡಿ, ಕಾರಿನ ಒಳಗೆ ಇಟ್ಟಿದ್ದ 2 ಲಕ್ಷ ರೂಪಾಯಿಗಳದ್ದ ಹಣದ ಬ್ಯಾಗ್ ಮತ್ತು ಸದರಿ ಬ್ಯಾಗ್‌ನ ಒಳಗೆ ಇಟ್ಟಿದ್ದ ಕೆನರಾ ಬ್ಯಾಂಕಿನ ಎ.ಟಿ.ಎಂ. ಕಾರ್ಡ್, ವಾಹನ ಚಾಲನ ಪರವಾನಗಿ, ವಾಹನದ ಆರ್.ಸಿ. ದಾಖಲಾತಿ, ಪಾನ್‌ಕಾರ್ಡ್, ಇನ್ಸೂರೆನ್ಸ್ ಪಾವತಿ ರಶೀದಿ, ಕೆನರಾಬ್ಯಾಂಕಿನ ಚೆಕ್ ಪುಸ್ತಕ ಹಾಗೂ ಇತರೆ ಅಸಲು ದಾಖಲೆಪತ್ರಗಳದ್ದು, ಅವುಗಳನ್ನೂ ಸಹ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ನಂತರ ಅಕ್ಕಪಕ್ಕಗಳಲ್ಲಿ ವಿಚಾರಿಸಿದಾಗ ಕಳ್ಳರ ಸುಳಿವು ದೊರೆತ್ತಿಲ್ಲ
ಹಣ ಹಾಗೂ ಅಗತ್ಯ ದಾಖಲಾತಿಗಳನ್ನು ಕಳೆದುಕೊಂಡ ಸತೀಶ್ ಅವರು ನಗರ ಠಾಣೆಯ ಪಿಎಸ್ಐ ಶಿವಶಂಕರ್ ಅವರಿಗೆ ದೂರು ನೀಡಿದ್ದು ಕಳ್ಳನನ್ನು ಪತ್ತೆಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಂಡು, ನನಗೆ ನ್ಯಾಯ ದೊರಕಿಸಿಕೊಟ್ಟು, ಕದ್ದು ತೆಗೆದುಕೊಂಡ ಹೋಗಿರುವ ನಗದು ಮತ್ತು ದಾಖಲೆಪತ್ರಗಳನ್ನು ವಾಪಾಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.