Friday, April 18, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆ ಸಾವು

ಸಕಲೇಶಪುರ : ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆ ಸಾವು

ಸಕಲೇಶಪುರ : ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆ ಸಾವು

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ರ ಬಾಗೆ ಗ್ರಾಮದ ಬಳಿ ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆಯೊಂದು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

 ಈ ಪ್ರದೇಶದಲ್ಲಿ ಪದೇ ಪದೇ ಜಿಂಕೆಗಳು ರಾಷ್ಟ್ರೀಯ ಹೆದ್ದಾರಿ ಚಲಿಸುವ ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇದ್ದರೂ ಅರಣ್ಯ ಇಲಾಖೆ ಮಾತ್ರ ಯಾವುದೇ ಮುಂಜಾಗ್ರತ ಕ್ರಮವನ್ನು ಕೈಗೊಂಡಿಲ್ಲ

 ಕಾಡು ಪ್ರಾಣಿಗಳು ಓಡಾಡುವ ಪ್ರದೇಶವಾಗಿದ್ದು ವಾಹನ ಸವಾರರಿಗೆ ಯಾವುದೇ ಸೂಚನೆ ಮೂಲಕ ಇಲ್ಲದಿರುವುದು ಕಾಡು ಪ್ರಾಣಿಗಳು ಹೆದ್ದಾರಿ ವಾಹನಕ್ಕೆ ಸಿಲುಕಿ ಸಾವನ್ನಪ್ಪತ್ತಿರುವ ಘಟನೆ ಹೆಚ್ಚಾಗ ತೊಡಗಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತಾಗಿ ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಶಿಲ್ಪ ಈ ಪ್ರದೇಶದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿ ಕಡಿತಗೊಳಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ

RELATED ARTICLES
- Advertisment -spot_img

Most Popular