Saturday, April 12, 2025
Homeಸುದ್ದಿಗಳುರಾಜ್ಯಕರ್ನಾಟಕದಲ್ಲಿ ಇಂದಿನಿಂದ ಮಲೆನಾಡು ರಕ್ಷಣಾ ಸೇನೆ ಕರ್ನಾಟಕ ಸಂಘಟನೆ ಅಸ್ತಿತ್ವಕ್ಕೆ.

ಕರ್ನಾಟಕದಲ್ಲಿ ಇಂದಿನಿಂದ ಮಲೆನಾಡು ರಕ್ಷಣಾ ಸೇನೆ ಕರ್ನಾಟಕ ಸಂಘಟನೆ ಅಸ್ತಿತ್ವಕ್ಕೆ.

ಕರ್ನಾಟಕದಲ್ಲಿ ಇಂದಿನಿಂದ ಮಲೆನಾಡು ರಕ್ಷಣಾ ಸೇನೆ ಕರ್ನಾಟಕ ಸಂಘಟನೆ ಅಸ್ತಿತ್ವಕ್ಕೆ.

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಂದ ಕಾರ್ಯಕ್ರಮ ಉದ್ಘಾಟನೆ.

ಸಂಸ್ಥಾಪಕ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ನೇತ್ರತ್ವದಲ್ಲಿ ರಾಜ್ಯದ್ಯಂತ ವಿಸ್ತಾರಗೊಳ್ಳಲಿರುವ ಸಂಘಟನೆ.

ಬೆಂಗಳೂರು :ನಾಡು ನುಡಿ, ನೆಲ ಜಲದ ರಕ್ಷಣೆಗಾಗಿ ಈಗಾಗಲೇ ರಾಜ್ಯದಲ್ಲಿ ನೂರಾರು ಸಂಘಟನೆಗಳು ಕೆಲಸ ಮಾಡುತ್ತಿವೆ. ಆದರೆ ವಿಶೇಷವಾಗಿ ಮಲೆನಾಡು ಭಾಗದ ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಇಂದಿನಿಂದ ಮಲೆನಾಡಿನ ಸಮಾಜ ಸೇವಕ ಸಕಲೇಶಪುರದ ಸಾಗರ್ ಜಾನೇಕೆರೆ ನೇತೃತ್ವದಲ್ಲಿ ಮಲೆನಾಡು ರಕ್ಷಣಾ ಸೇನೆ ಎಂಬ ಸಂಘಟನೆ ಸೋಮವಾರದಿಂದ ರಾಜ್ಯದ್ಯಂತ ಅಸ್ತಿತ್ವಕ್ಕೆ ಬಂದಿದೆ.

ಸಕಲೇಶಪುರ ತಾಲೂಕಿನ  ಯಸಳೂರಿನ ತೆಂಕಲಗೂಡು ಬೃಹನ್ ಮಠದ  ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದೊಂದಿಗೆ ನಾಡಿನ ಹೆಸರಾಂತ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ವೃಕ್ಷ ಮಾತೆ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ, ನಿರಾಶಿಕರ ಪಾಲಿನ ಆಶಾಕಿರಣ ಪ್ರಶಾಂತ ಚಕ್ರವರ್ತಿ,ಡಾ|| ಎಂ.ರಾಮಚಂದ್ರ ( ಹೂಡಿ ಚಿನ್ನಿ ಅಣ್ಣ), , ಶ್ರೀ ಬಸವರಾಜ ಪಡುಕೋಟೆ ಸೇರಿದಂತೆ ಇನ್ನಿತರ ಮುಖಂಡರ ಸಮ್ಮುಖದಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ಗಿಡಕ್ಕೆ ನೀರರೆಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮಲೆನಾಡು ಭಾಗದಲ್ಲಿ ಪಶ್ಚಿಮ ಘಟ್ಟಗಳ ನಾಶ, ಎಚ್. ಆರ್. ಪಿ ಹಗರಣ, ಕಾಡಾನೆ ಸಮಸ್ಯೆ, ಹೆದ್ದಾರಿ ದುಸ್ಥಿತಿ ಸೇರಿದಂತೆ ಇನ್ನೂ ಹತ್ತು ಹಲವು ಜ್ವಲಂತ ಸಮಸ್ಯೆಗಳು ಇಲ್ಲಿನ ಜನರನ್ನು ಬೆಂಬಿಡದೆ ಕಾಡುತ್ತಿದೆ. ಇವೆಲ್ಲದಕ್ಕೂ ಉತ್ತರವಾಗಿ ಮಲೆನಾಡು ರಕ್ಷಣಾ ಶ್ರೀನಿವ್ ತನ್ನದೇ ಆದ ರೀತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ತೆರೆಸಲು ಮುಕ್ತವಾಗಿ,ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲು ತನ್ನದೇ ಆದ ಪಡೆಯನ್ನು ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ಪ್ರಾಮಾಣಿಕವಾಗಿ ನಮ್ಮ ಸಂಘಟನೆ ಕಾರ್ಯನಿರ್ವಹಿಸಲಿದೆ ಎಂದು ರಾಜ್ಯಧ್ಯಕ್ಷ ಸಾಗರ್ ಜಾನೇಕೆರೆ ತಿಳಿಸಿದ್ದಾರೆ.

ಸಂಘಟನೆಯ ಗೌರವಾಧ್ಯಕ್ಷರಾಗಿ ಹಿರಿಯ ಮುಖಂಡ ಸಮಾಜ ಸೇವಕರಾದ ಯಡೇಹಳ್ಳಿ ಆರ್ ಮಂಜುನಾಥ್, ರಾಜ್ಯ ಉಪಾಧ್ಯಕ್ಷರಾಗಿ ದರ್ಶನ್ ಪೂಜಾರಿ, ರಾಜ್ಯ ಕಾರ್ಯದರ್ಶಿಯಾಗಿ ಕೆ. ಆರ್ ಅಶೋಕ್, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್, ರಾಜ್ಯ ಕಾನೂನು ಸಲಹೆಗಾರರಾಗಿ ಯಶವಂತ್ ಕುಮಾರ್, ರಾಜ್ಯದ ಉಸ್ತುವಾರಿಯಾಗಿ ವಸಂತ್ ಕುಮಾರ್, ರಾಜ್ಯ ಯುವ ಮೋರ್ಚ ಘಟಕದ ಅಧ್ಯಕ್ಷರಾಗಿ ಕೃತಿವರ್ಮ, ಹಾಗೂ ರಾಜ್ಯ ಖಜಾಂಚಿಯಾಗಿ ಖಲೀಲ್ ಆಚಂಗಿ ನೇಮಕಗೊಂಡಿದ್ದಾರೆ.

ಘಟಕದ ಉದ್ಘಾಟನೆ ಉದ್ಘಾಟನಾ ಸಮಾರಂಭದಲ್ಲಿ ವೇಳೆ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಲಾಯಿತು.

RELATED ARTICLES
- Advertisment -spot_img

Most Popular