ಸಕಲೇಶಪುರ : ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು ಕ್ಯಾರೆ ಎನ್ನದ ಸಕಲೇಶಪುರದ ಅಧಿಕಾರಿಗಳು.
ಯಾವುದೇ ಪಕ್ಷದ ಅಭ್ಯರ್ಥಿಗಳು ಊರಿಗೆ ಕಾಲಿಡದಂತೆ ಎಚ್ಚರಿಕೆ ನೀಡಿದ ಮೂಲ ಸೌಕರ್ಯ ವಂಚಿತ ಗ್ರಾಮಸ್ಥರು.
ಚೀರಿ ಚಿನ್ನಹಳ್ಳಿ ಗ್ರಾಮ ಬಿಟ್ಟು ವಲಸೆ ಹೋಗುತ್ತಿರುವ ಗ್ರಾಮಸ್ಥರು..
ಸಕಲೇಶಪುರ : ಮೂಲಭೂತ ಸೌಕರ್ಯ ಕೊರತೆ (ರಸ್ತೆ) ಮತ್ತು ಸೇತುವೆ ಸೌಲಭ್ಯ ನೀಡದಿರುವುದನ್ನು ಖಂಡಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಿಸುವ ಎಚ್ಚರಿಕೆ ನೀಡಿದ್ದರು ಸಹ ತಾಲೂಕು ಮಟ್ಟದ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಚೀರಿ ಚಿನ್ನಹಳ್ಳಿ ಗ್ರಾಮದಲ್ಲಿ ಸುಮಾರು 80 ಮನೆಗಳು ಇದ್ದು ಮೂಲಭೂತ ಸೌಕರ್ಯವಿಲ್ಲದ ಕಾರಣ 45 ಕುಟುಂಬಗಳು ಪರ ಊರಿಗೆ ವಲಸೆ ಹೋಗಿದೆ. ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಗೆ ಹೋಗಲು ರೋಗಿಗಳಿಗೆ ಸರಿಯಾದ ರಸ್ತೆ ಮತ್ತು ಸೇತುವೆ ಇಲ್ಲದ ಕಾರಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 75 ವರ್ಷಗಳಿಂದ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಕನಿಷ್ಠ ಮೂಲ ಸೌಕರ್ಯದಿಂದ ವಂಚಿತರಾಗಿದ್ದು ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರ ಮಾಡಲು ಊರಿನ ಗ್ರಾಮಸ್ಥರು ತೀರ್ಮಾನಿಸಿದ್ದಾರೆ . ಈ ಕುರಿತು ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ ಮತ್ತು ಎತ್ತಿನ ಹೊಳೆಗೆ ಚೇರಿ ಹೊಳೆ, ನದಿ ನೀರು,ಮ ಹೋಗುತ್ತದೆ. ಆದರೂ ಕೂಡ ಶಾಸಕರು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಆದ್ದರಿಂದ ಊರಿನ ಗ್ರಾಮಸ್ಥರು ಎಲ್ಲ ಸೇರಿ ಮತದಾನ ಬಹಿಸ್ಕರ ಮಾಡಲು ನಿರ್ಧರಿಸುತ್ತಿದ್ದು. ಈ ಬಗ್ಗೆ ಪ್ರತಿಭಟನೆ ನಡೆಸುವ ಮುನ್ನ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರು ಯಾವೊಬ್ಬ ಅಧಿಕಾರಿಯೂ ತಿರುಗಿ ನೋಡದೆ ಇರೋದು ಗ್ರಾಮಸ್ಥರ ಆಕ್ರೋಶಕ್ಕೆ ಅಧಿಕಾರಿಗಳು ಗುರಿಯಾಗಿದ್ದಾರೆ.
ಈ ಸಂಧರ್ಭದಲ್ಲಿ ಗ್ರಾಮಸ್ಥರುಗಳಾದ ಲಕ್ಷ್ಮಣ್, ರಾಜೇಗೌಡ, ಗ್ರಾಪಂ ಅಧ್ಯಕ್ಷ ರೇಣುಕಾ, ಪ್ರಜ್ವಲ್ ಚಿನ್ನಳ್ಳಿ, ಗ್ರಾಪಂ ಸದಸ್ಯೆ ರೂಪ, ಗ್ರಾಮಸ್ಥರಾದ ಗಣೆಶ್, ಕಿರಣ್, ಕೀರ್ತಿ, ಯದುಕುಮಾರ್, ಸುರೇಶ್, ಅರುಣ್ ಇನ್ನಿತರರು ಇದ್ದರು