Sunday, November 24, 2024
Homeಸುದ್ದಿಗಳುಸಕಲೇಶಪುರಶಾಲಾ ಮಕ್ಕಳ ಕುಡಿಯುವ ನೀರಿಗೂ ಕುತ್ತು ತಂದ ಕಿಡಿಗೇಡಿಗಳು..?

ಶಾಲಾ ಮಕ್ಕಳ ಕುಡಿಯುವ ನೀರಿಗೂ ಕುತ್ತು ತಂದ ಕಿಡಿಗೇಡಿಗಳು..?

ಶಾಲಾ ಮಕ್ಕಳ ಕುಡಿಯುವ ನೀರಿಗೂ ಕುತ್ತು ತಂದ ಕಿಡಿಗೇಡಿಗಳು..?

ಬಾಳ್ಳುಪೇಟೆಯ ಚಿಕ್ಕನಾಯಕನಹಳ್ಳಿ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್ ದ್ವಂಸ.

 ಕೃತ್ಯದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ ಗ್ರಾಮ ಪಂಚಾಯತಿ ಸದಸ್ಯ ರೋಹಿತ್.

ಸಕಲೇಶಪುರ : ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದೇ ರೀತಿ ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆದರ್ಶ ಗ್ರಾಮದ ಯೋಜನೆ ಅಡಿಯಲ್ಲಿ ಸಾವಿರ ಲೀಟರ್ ಸಮರ್ಥ್ಯದ  ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು.

 ಆದರೆ ಕಳೆದ ರಾತ್ರಿ ನೀರಿನ ಟ್ಯಾಂಕ್ ಸಂಪೂರ್ಣ ಧ್ವಂಸಗೊಂಡಿದ್ದು ಈ ಘಟನೆ ಆಕಸ್ಮಿಕವಾಗಿ ನಡೆದಿದೆಯೋ ಅಥವಾ ಕಿಡಿಗೇಡಿಗಳ ಕೃತ್ಯಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.

 ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಒಂದು ವೇಳೆ ಕಿಡಿಗೇಡಿಗಳೇ ಇಂಥ ಕೆಲಸ ಮಾಡಿದ್ದರೆ ಅವರಿಗೆ ಕಾನೂನಿನಯಡಿಲ್ಲಿ ಕಠಿಣ  ಕ್ರಮ ತೆಗೆದುಕೊಳ್ಳುವಂತೆ ಚಿಕ್ಕನಾಯಕನಹಳ್ಳಿ ವಾರ್ಡಿನ ಗ್ರಾಮ ಪಂಚಾಯಿತಿ ಸದಸ್ಯ ರೋಹಿತ್ ಹಾಗೂ ರತ್ನ ರವರು ಒತ್ತಾಯಿಸಿದ್ದಾರೆ.

RELATED ARTICLES
- Advertisment -spot_img

Most Popular