ಸಕಲೇಶಪುರ : e-ಕ್ಷಣ ಪ್ರಮಾಣ ಪತ್ರಗಳ ವಿತರಣೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಸಕಲೇಶಪುರ ತಾಲೂಕು.
ಅಟಲ್ ಜೀ ಜನಸ್ನೇಹಿ ನಿರ್ದೇಶಕರಿಂದ ತಹಸೀಲ್ದಾರ್ ಜೈ ಕುಮಾರ್ ಗೆ ಅಭಿನಂದನ ಪತ್ರ.
ಸಕಲೇಶಪುರ :- ಚುರುಕುತನದಿಂದ ಕಾರ್ಯನಿರ್ವಹಿಸಿ ಸಿಬ್ಬಂದಿಗಳಿಗೂ ಸಹ ಸಕಾಲದಲ್ಲಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ e- ಕ್ಷಣ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವಲ್ಲಿ ಸಕಲೇಶಪುರ ತಾಲೂಕು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರದ ನಿರ್ದೇಶಕರಾದ ಗಂಗೂ ಬಾಯಿ ರಮೇಶ್ ಮಾನಕರ ಅವರು ತಹಸೀಲ್ದಾರ್ ಜೈ ಕುಮಾರ್ ಅವರಿಗೆ ಅಭಿನಂದನೆ ಪತ್ರ ಕಳಿಸಿದ್ದಾರೆ.