ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಧನ ಮಂಜೂರು ಶಾಸಕ ಎಚ್. ಕೆ ಕುಮಾರಸ್ವಾಮಿ ಮನವಿ
ಸಕಲೇಶಪುರ :ತಾಲ್ಲೂಕಿನ ಕಾಡುಮನೆ ಸಮೀಪದ ಮಣಿಭಕ್ತಿ ರಕ್ಷಿತಾ ಆರಣ್ಯದಲ್ಲಿ 40:16-02-2023 ರಂದು ಮಧ್ಯಾಹ್ನ ಬೆಂಕಿ ಆರಿಸಲು ಹೋಗಿದ್ದ. ಫಾರೆಸ್ಟರ್ ಮಂಜುನಾಥ್, ಅರ್ಡ್ ಸುಂದರೇಶ್, ಹಾಗೂ ಹೊರಗುತ್ತಿಗೆ ನೌಕರರಾದ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ ಸುಂದರೇಶ್ ಎಂಬುವವರು ಈಗಾಗಲೇ ಸಾವನಪ್ಪಿದ್ದು, ಸರ್ಕಾರದಿಂದ ರೂ. 50.00 ಲಕ್ಷಗಳ ಪರಿಹಾರವನ್ನು ಘೋಷಿಸಿರುವುದು ಸ್ವಾಗತಾರ್ಹ, ಫಾರೆಸ್ಟರ್ ಮಂಜುನಾಥ್ ರವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಇಬ್ಬರು ಸರ್ಕಾರಿ ನೌಕರರಾಗಿರುತ್ತಾರೆ.
ಆದರೆ ತುಂಗೇಶ್, ಹಾಗೂ ಮಹೇಶ್ ರವರು ಹೊರಗುತ್ತಿಗೆ ನೌಕರರಾಗಿದ್ದು, ಇವರು ಕೂಡ ಶೇ.40ರಷ್ಟು ಸುಟ್ಟ ಗಾಯಗಳಿಂದ ಹಾಸನದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆ ಕೂಡ ಆಗಿರುತ್ತದೆ. ಸರ್ಕಾರ ಸಂಪೂರ್ಣವಾಗಿ ಚಿಕಿತ್ಸಾ ವೆಚ್ಚವನ್ನು ಬರಿಸುವುದಾಗಿ ಹೇಳಿದ್ದು ಇದು ಕೂಡ ಸ್ವಾಗತಾರ್ಹವಾಗಿರುತ್ತದೆ. ಆದರೆ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಇವರು ಸ್ಥಳೀಯರಾಗಿದ್ದು, ರಕ್ಷಿತಾ ಆರಣ್ಯದ ಬಗ್ಗೆ ಇವರುಗಳಿಗೆ ಸಂಪೂರ್ಣ ಮಾಹಿತಿ ಇದ್ದು, ಇವರುಗಳೇ ಬೆಂಕಿಯಿಂದ ಹೊರಬಂದು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅಲ್ಲದೆ ಸುಮಾರು 12 ಕಿ.ಮೀ ಕಾಲ್ನಡಿಗೆ ನಡೆದುಕೊಂಡು ಜೊತೆಗೆ ಇಬ್ಬರು ಫಾರೆಸ್ಟರ್ ಗಳನ್ನು ಒತ್ತು ತರಲು ಸಹಾಯ ಮಾಡಿರುತ್ತಾರೆ. ಈ ಇಬ್ಬರು ಸದಸ್ಯರ ಕುಟುಂಬಗಳು ಕಡುಬಡವರಾಗಿದ್ದು, ಅಲ್ಲದೆ ಇವರು ಶೇ. 40ರಷ್ಟು ಸುಟ್ಟುಹೋಗಿರುವುದರಿಂದ ಇವರು ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿರುತ್ತದೆ.ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಗರಿಷ್ಠ ಮೊತ್ತವನ್ನು ಮಂಜೂರು ಮಾಡಿಕೊಡುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ