Saturday, April 19, 2025
Homeಸುದ್ದಿಗಳುಸಕಲೇಶಪುರಕರವೇ ಸ್ವಾಭಿಮಾನಿ ಸೇನೆಯ ಹಾನುಬಾಳು ಅಧ್ಯಕ್ಷರ ರಾಜೀನಾಮೆ

ಕರವೇ ಸ್ವಾಭಿಮಾನಿ ಸೇನೆಯ ಹಾನುಬಾಳು ಅಧ್ಯಕ್ಷರ ರಾಜೀನಾಮೆ

ಕರವೇ ಸ್ವಾಭಿಮಾನಿ ಸೇನೆಯ ಹಾನುಬಾಳು ಅಧ್ಯಕ್ಷರ ರಾಜೀನಾಮೆ

 ಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಸೇನೆಯ ಪದಾಧಿಕಾರಿಗಳ ರಾಜೀನಾಮೆ ಪರ್ವ ಮುಂದುವರೆದಿದ್ದು ಇಂದು ಹಾನುಬಾಳು ಹೋಬಳಿ ಅಧ್ಯಕ್ಷರಾದ ದಿಲೀಪ್ ಶೈವ ರವರು ರಾಜೀನಾಮೆ ಘೋಷಿಸಿದ್ದಾರೆ.

 ಕೆಲ ದಿನಗಳ ಹಿಂದೆ ತಾಲೂಕು ಅಧ್ಯಕ್ಷ  ಸಾಗರ್ ಜಾನೇಕೆರೆ, ಬೆಳಗೋಡು ಹೋಬಳಿ ಅಧ್ಯಕ್ಷ ದರ್ಶನ್ ಪೂಜಾರಿ ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದರು

ದಿಲೀಪ್ ಶೈವ ರವರ ರಾಜೀನಾಮೆ ಪತ್ರದ ಸಾರಾಂಶ 

ಹೋರಾಟಕ್ಕೆ ಅಲ್ಪ ವಿರಾಮ

   ಸಮಸ್ತ ಕಾರ್ಯಕರ್ತ ಸಹೋದರರೇ, ಸ್ನೇಹಿತರೇ, ಮಾಧ್ಯಮ ಮಿತ್ರರೇ ಮತ್ತು ಸಾರ್ವಜನಿಕ ಬಂಧುಗಳೇ ಈ ಮೂಲಕ ತಮಗೆ ತಿಳಿಸುವುದೇನೆಂದರೆ ಕಳೆದ ನಾಲ್ಕು ವರ್ಷಳಿಂದ ನಿರಂತರವಾಗಿ ಒಂದಲ್ಲ ಒಂದು ಹೋರಾಟದ ಮುಖಾಂತರ ನಿಮಗೆಲ್ಲ ಚಿರಪರಿಚಿತ ಆಗಿರುವ ಕ.ರ.ವೇ ಸ್ವಾಭಿಮಾನಿ ಸೇನೆ ಎಂಬ ಬ್ಯಾನರಿನ ಅಡಿಯಲ್ಲಿ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿರುವ ಸಾಗರ್ ಜಾನೇಕೆರೆ ಅವರು ತಮ್ಮ ವಯಕ್ತಿಕ ಕಾರಣಗಳಿಂದಾಗಿ ಅವರ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುತಾರೆ ಅದರಿಂದ ನಾನು ನನ್ನ ಹಾನು ಬಾಳ ಹೋಬಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದೇನೆ ನನ್ನಿಂದ ಏನಾದರೂ ಸಣ್ಣ ಪುಟ್ಟ ತಪ್ಪುಗಳು ಆಗಿದ್ದಲ್ಲಿ ನನಗೆ ಕ್ಷಮೆ ನೀಡಬೇಕು ಮತ್ತು ನನ್ನ ಮುಂದಿನ ಜೀವನಕ್ಕೆ ಇದೇ ರೀತಿಯ ಪ್ರೋತ್ಸಾಹ ಸಹಕಾರ ಹೀಗೆ ಇರಬೇಕು ಎಂದು ಕೇಳಿಕೊಳ್ಳುತ್ಠೇನೆ. ಮತ್ತೊಮ್ಮೆ ಎಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾ ಕ.ರ.ವೇ ಸ್ವಾಭಿಮಾನಿ ಸೇನೆಯ ಹಾನು ಬಾಳ ಹೋಬಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ.

             ವಂದನೆಗಳೊಂದಿಗೆ,

                   ಇಂತಿ ನಿಮ್ಮ ಮನೆಮಗ

                    ದಿಲೀಪ್ ಶೈವ

RELATED ARTICLES
- Advertisment -spot_img

Most Popular