Monday, November 25, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಕಾಡ್ಗಿಚ್ಚಿನ ಬಗ್ಗೆ  ಬುದ್ದಿ ಮಾತು ಹೇಳಲು ಹೋದ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲು...

ಸಕಲೇಶಪುರ : ಕಾಡ್ಗಿಚ್ಚಿನ ಬಗ್ಗೆ  ಬುದ್ದಿ ಮಾತು ಹೇಳಲು ಹೋದ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲು ಮುಂದಾದ ಸಿನಿಮಾ ಚಿತ್ರತಂಡ.

ಸಕಲೇಶಪುರ : ಕಾಡ್ಗಿಚ್ಚಿನ ಬಗ್ಗೆ  ಬುದ್ದಿ ಮಾತು ಹೇಳಲು ಹೋದ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲು ಮುಂದಾದ ಸಿನಿಮಾ ಚಿತ್ರತಂಡ.

  ಸುಂದರೇಶ್ ಸಾವು ಮಾಸುವ ಮುನ್ನವೇ ಮತ್ತೊಂದು ಅವಘಡಕ್ಕೆ ಅವಕಾಶ ಮಾಡಿಕೊಡದಂತೆ ಸ್ಥಳೀಯರ ಆಗ್ರಹ

ಸಕಲೇಶಪುರ : ಪಶ್ಚಿಮಘಟ್ಟದಲ್ಲಿ ಮತ್ತೊಂದು ಬೆಂಕಿ ಅವಘಡಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಬುದ್ದಿಮಾತು ಹೇಳಲು ಹೋದ ಗ್ರಾಮಸ್ಥರ ಮೇಲೆ ಸಿನಿಮಾ ತಂಡವೊಂದು ಹಲ್ಲೆ ನಡೆಸಲು ಮುಂದಾದ ಘಟನೆ ತಾಲೂಕಿನ ಗಡಿಯಂಚಿನ ಪ್ರದೇಶ ಪಟ್ಲ ಬೆಟ್ಟದಲ್ಲಿ ನಡೆದಿದೆ.

ಘಟನೆ ವಿವರ : ಊರ ಜನರಿಗೆ ಪಟ್ಲಾ ಬೆಟ್ಟದ ಮೇಲೆ ಬೆಂಕಿ ಜ್ವಾಲೆ ಕಾಣಿಸಿಕೊಂಡಿದ್ದು ಇದರಿಂದ ತಳಮಳಗೊಂಡ ಗ್ರಾಮಸ್ಥರು ಕೂಡಲೆ ಕಂದಾಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಸಿಬ್ಬಂದಿ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ಹೋಗಿ ನೋಡುವಾಗ ಸಿನಿಮಾ ತಂಡವೊಂದು ಸಿನಿಮಾ ಚಿತ್ರಿಕರಣಕ್ಕೆ ತಮಗೆ ಬೇಕಾದ ರೀತಿಯಯಲ್ಲಿ ಲೋಕೆಷನ್ ಗುರುತಿಸಿ ಸೆಟ್ ನಿರ್ಮಿಸಲು ಯಂತ್ರೋಪಕರಣಗಳನ್ನು ಬಳಸಿ ವೆಲ್ಡಿಂಗ್ ಮಾಡುತ್ತಿದ್ದರು ಮತ್ತು ಸುತ್ತಮುತ್ತ ಒಣಹುಲ್ಲಿಗೆ ಬೆಂಕಿ ಹಾಕಿದ್ದಾರೆ. 

ಪ್ರವಾಸಿಗರು ಬೆಂಕಿಯ ಮೇಲೆಯೇ ಪ್ಯಾರಾಗ್ಲೈಡಿಂಗ್ ಹಾರಾಟ ಮಾಡುತ್ತಿದ್ದರು.

 ಸ್ಥಳಕ್ಕೆ ಬಂದ ಗ್ರಾಮಸ್ಥರು ಪಶ್ಚಿಮಘಟ್ಟದ ಕಾಡುಮನೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತದಿಂದ ಅರಣ್ಯ ಇಲಾಖೆಯ ಮೂವರು ಗಾಯಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಪಟ್ಲಾಬೆಟ್ಟ ಪ್ರದೇಶ ಗೋಮಾಳಕ್ಕೆ ಒಳಪಟ್ಟಿದೆ ಅದರ ಸುತ್ತಮುತ್ತ ಬಿಸ್ಲೆ ರಕ್ಷಿತ ಅರಣ್ಯ ಪ್ರದೇಶವಿದೆ ಹಾಗಾಗಿ ಬೆಂಕಿ ಹಾಕುವುದು ಅಷ್ಟೊಂದು ಸೂಕ್ತವಲ್ಲ ಮತ್ತು ಕೆಳಗಡೆ ಬೆಂಕಿ ಹೊತ್ತಿಉರಿವಾಗ ಪ್ಯಾರಾಗ್ಲೈಡಿಂಗ್ ಮಾಡುವುದು ಸೂಕ್ತವಲ್ಲ

 ನೀವು ಹುಲ್ಲಿಗೆ ಬೆಂಕಿ ಹಚ್ಚಿದರೆ ಅದು ಕಾಡಿಗೂ ವ್ಯಾಪಿಸುವ ಸಾಧ್ಯತೆ ಇದ್ದು ಜಾಗೃತರಾಗಿ ಕಾರ್ಯನಿರ್ವಹಿಸಿ ಎಂದು ಬುದ್ಧಿ ಮಾತು ಹೇಳಲು ಅಲ್ಲಿದ್ದವರು ಗ್ರಾಮಸ್ಥರ ವಿರುದ್ಧ ಅವಾಸ್ತವಿಕ ಬಾಷೆಗಳನ್ನು ಬಳಸಿದಲ್ಲದೆ ಹಲ್ಲೆಗೂ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಲಿಖಿತ ದೂರನ್ನು ಕಂದಾಯ ಇಲಾಖೆಯ ಸುನಿಲ್ ಅವರು ಯಸಳೂರು ಠಾಣೆಗೆ ದೂರು ನೀಡಿದ್ದಾರೆ.

RELATED ARTICLES
- Advertisment -spot_img

Most Popular