Wednesday, January 28, 2026
Homeಸುದ್ದಿಗಳುಸಕಲೇಶಪುರಸಕಲೇಶಪುರ : ಕಾಡ್ಗಿಚ್ಚಿಗೆ ಸಿಲುಕಿದ್ದ ಅರಣ್ಯ ವೀಕ್ಷಕ ಸುಂದರೇಶ್ ಚಿಕಿತ್ಸೆ ಫಲಕಾರಿಯಾಗದೆ ನಿಧನ.

ಸಕಲೇಶಪುರ : ಕಾಡ್ಗಿಚ್ಚಿಗೆ ಸಿಲುಕಿದ್ದ ಅರಣ್ಯ ವೀಕ್ಷಕ ಸುಂದರೇಶ್ ಚಿಕಿತ್ಸೆ ಫಲಕಾರಿಯಾಗದೆ ನಿಧನ.

ಸಕಲೇಶಪುರ : ಕಾಡ್ಗಿಚ್ಚಿಗೆ ಸಿಲುಕಿದ್ದ ಅರಣ್ಯ ವೀಕ್ಷಕ ಸುಂದರೇಶ್ ಚಿಕಿತ್ಸೆ ಫಲಕಾರಿಯಾಗದೆ ನಿಧನ.

ಸಕಲೇಶಪುರ: ತಾಲೂಕಿನ ಮೂರ್ಕಣ್ಣು ಗುಡ್ಡ ಅರಣ್ಯ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಕಾಡ್ಗಿಚ್ಚು ಜ್ವಾಲೆಗೆ ಸಿಲುಕಿ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಯಗೊಂಡಿದ್ದು, ಇದರಲ್ಲಿ ಫಾರೆಸ್ಟರ್ ಮಂಜುನಾಥ್, ಅರಣ್ಯ ರಕ್ಷಕ ಸುಂದರೇಶ್ ಗಂಭೀರ ಗಾಯಗೊಂಡಿದ್ದು ಅರಣ್ಯ ವೀಕ್ಷಕರಾದ ತುಂಗೇಶ್ , ಮಹೇಶ್ ಸಹ ಗಾಯಗೊಂಡ ಹಿನ್ನೆಲೆಯಲ್ಲಿ ಪಟ್ಡಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಜಿಲ್ಲಾಸ್ಫತ್ರೆಯಲ್ಲಿ ಮಂಜುನಾಥ್ ಹಾಗೂ ಸುಂದರೇಶ್ ರವರಿಗೆ ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ಗುರುವಾರ ತಡರಾತ್ರಿ  ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಸುಟ್ಟ ಗಾಯಗಳೊಂದಿಗೆ ಸುಂದರೇಶ್ ನಿಧನರಾಗಿದ್ದಾರೆ. ನಿನ್ನೆ  ಆಸ್ಪತ್ರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಎಚ್.ಕೆ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

RELATED ARTICLES
- Advertisment -spot_img

Most Popular