ಪಶ್ಚಿಮ ಘಟ್ಟದ ಕಾಡಿಗೆ ಬೆಂಕಿ : ಬೆಂಕಿ ನಂದಿಸಲು ಹೋದ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗಂಭೀರ ಗಾಯಪಶ್ಚಿಮ ಘಟ್ಟದ ಕಾಡಿಗೆ ಬೆಂಕಿ : ಬೆಂಕಿ ನಂದಿಸಲು ಹೋದ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗಂಭೀರ ಗಾಯ
ಕಾಡಿನಿಂದ ಕಾಡುಮನೆಗೆ ಗ್ರಾಮಕ್ಕೆ ಸುಮಾರು 12ಕಿ.ಮೀ ದೂರ ಗಾಯಾಳುಗಳನ್ನು ಹೊತ್ತಿಕೊಂಡು ತರುತ್ತಿರುವ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು
ಸಕಲೇಶಪುರ: ಕಾಡಿಗೆ ಬೆಂಕಿ ನಾಲ್ಕು ಜನಕ್ಕೆ ತೀವ್ರ ಗಾಯ
ಸಕಲೇಶಪುರ : ಕಾಡ್ಗಿಚ್ಚನ್ನು ನಂದಿಸಲು ಹೋದ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಕಾಡಿನಿಂದ ಗ್ರಾಮಸ್ಥರು ಹಾಗೂ ಇತರ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ಸುಮಾರು 12 ಕಿ.ಮೀ ದೂರ ಗಾಯಾಳುಗಳನ್ನು ಎತ್ತಿಕೊಂಡು ಬಂದು ನಂತರ ಆ್ಯಂಬುಲೆನ್ಸ್ ಮುಖಾಂತರ ಪಟ್ಟಣದ ಕ್ರಾಫರ್ಡ್ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗುತ್ತಿದೆ.
ತಾಲ್ಲೂಕಿನ ಕಾಡುಮನೆ ಸಮೀಪ ಮಣಿಬೀಡು ದೇವಸ್ಥಾನದ ಸಮೀಪವಿರುವ ಪಶ್ಚಿಮ ಘಟ್ಟದ ಕಾಡಿನಲ್ಲಿ ಅಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಹೋದ ಅರಣ್ಯ ಇಲಾಖೆಯ ಫಾರೆಸ್ಟರ್ ಮಂಜುನಾಥ್, ಅರಣ್ಯ ವೀಕ್ಷಕ ಸುಂದರೇಶ್ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ನರಳುತ್ತಿದ್ದು ಸಾವು ಬದುಕಿನ ನಡುವೆ ಮಾಡುತ್ತಿದ್ದಾರೆ. ಮತ್ತೊರ್ವ ಅರಣ್ಯ ವೀಕ್ಷಕ ತುಂಗೇಶ್ ತುಸು ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.