ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ: ಥ್ರೋಬಾಲ್ ಪಂದ್ಯಾಟದಲ್ಲಿ ನಂಜಮ್ಮ ಮಹಿಳಾ ಸಮಾಜ ತಂಡವು ಪ್ರಥಮ.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಂಡವು ದ್ವಿತೀಯಾ ಸ್ಥಾನ
ಸಕಲೇಶಪುರ : ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಿಳೆಯರಿಗೆ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ನಂಜಮ್ಮ ಮಹಿಳಾ ಸಮಾಜ ತಂಡವು ಪ್ರಥಮ ಸ್ಥಾನ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಂಡವು ದ್ವಿತೀಯಾ ಸ್ಥಾನವನ್ನು ಪಡೆಯಿತು.
ನಂಜಮ್ಮ ಮಹಿಳಾ ಸಮಾಜದ ಆವರಣದಲ್ಲಿ ನಡೆದ ಪಂದ್ಯಾವಳಿಯನ್ನು ಪುರಸಭಾ ಅಧ್ಯಕ್ಷ ಕಾಡಪ್ಪ ಉದ್ಘಾಟಿಸಿದರು. ಜೆಎಸ್‌ಎಸ್ ತಂಡವನ್ನು ಮಣಿಸಿ ನಂಜಮ್ಮ ಮಹಿಳಾ ಸಮಾಜ ತಂಡವು ಫೈನಲ್‌ಗೆ ಏರಿದರೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಂಡವು ಬಾಳ್ಳುಪೇಟೆ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಮೊದಲ ಸೆಟ್‌ನಲ್ಲಿ ಎರಡು ತಂಡಗಳು ಜಿದ್ದಾಜಿದ್ದಿಯಿಂದ ಆಟ ಪ್ರದರ್ಶನ ಮಾಡಿ ಅಂತಿಮ ಹಂತದ ವರೆಗೂ ವಿಜಯ ಲಕ್ಷ್ಮೀ ಯಾರಿಗೆ ಒಲಿಯುವುದೆಂದು ಕುತೂಹಲ ಮೂಡುತ್ತಿತ್ತು . ಅಂತಿಮವಾಗಿ ನಂಜಮ್ಮ ಸಮಾಜ ಮಹಿಳಾ ತಂಡವು ಮೊದಲ ಸೆಟ್ ನ್ನು 28-26 ಗೆದ್ದರೆ ದ್ವಿತೀಯ ಸೆಟ್ 26-16 ಗಳಿಂದ ಗೆಲುವು ಸಾಧಿಸಿತು.