Sunday, April 20, 2025
Homeಸುದ್ದಿಗಳುಸಕಲೇಶಪುರಹಾನುಬಾಳ್ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

ಹಾನುಬಾಳ್ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

ಹಾನುಬಾಳ್ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

ಸಕಲೇಶಪುರ: ತಾಲೂಕಿನ ಹಾನುಬಾಳು ಗ್ರಾಮ ಪಂಚಾಯಿತಿಗೆ 2021-22 ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರ ದೊರಕಿದೆ. 2018-19ರಲ್ಲೂ ಇದೇ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿತ್ತು. ತಾಲೂಕಿನ ಮಾದರಿ ಗ್ರಾ.ಪಂಗಳಲ್ಲಿ ಹಾನುಬಾಳ್ ಗ್ರಾ.ಪಂ ಅಗ್ರಸ್ಥಾನದಲ್ಲಿ ನಿಂತಿದ್ದು ಇಲ್ಲಿನ ಪಿಡಿಓ ಹರೀಶ್ ಹಾನುಬಾಳ್ ಗ್ರಾ.ಪಂಯನ್ನು ಮಾದರಿ ಗ್ರಾ.ಪಂಯನ್ನಾಗಿ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮವಹಿಸಿದ್ದಾರೆ. ಹಾನುಬಾಳ್ ಗ್ರಾ.ಪಂ ಭ್ರಷ್ಟಚಾರ ಮುಕ್ತವಾಗಿದ್ದು ಸ್ವಂತ ತ್ಯಾಜ್ಯ ವಿಲೇವಾರಿ ಘಟಕ, ಇ-ಗ್ರಂಥಾಲಯ ಮುಂತಾದ ಸೌಕರ್ಯಗಳನ್ನು ಹೊಂದಿದೆ. ಹಾನುಬಾಳ್ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದರಿಂದ ರಾಜ್ಯ ಸರ್ಕಾರದಿಂದ 5,00,000ರೂ ವಿಶೇಷ ಪ್ರೋತ್ಸಾಹ ಅನುಧಾನ ಈ ಗ್ರಾ.ಪಂಕ್ಕೆ ದೊರಕುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಕಾರಣರಾಗಿರುವ ಪಿಡಿಓ ಹರೀಶ್, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳಿಗೆ ವಾಸ್ತವ ನ್ಯೂಸ್ ಬಳಗ ಅಭಿನಂದನೆ ಸಲ್ಲಿಸುತ್ತದೆ.

RELATED ARTICLES
- Advertisment -spot_img

Most Popular