Sunday, November 24, 2024
Homeಸುದ್ದಿಗಳುಸಕಲೇಶಪುರನಿಸ್ವಾರ್ಥದ ಸೇವೆಯೆ ಸಂಘಟನೆ ಗುರಿಯಾಗಬೇಕು: ಡಿ.ವೈ.ಎಸ್.ಪಿ ಮಿಥುನ್.

ನಿಸ್ವಾರ್ಥದ ಸೇವೆಯೆ ಸಂಘಟನೆ ಗುರಿಯಾಗಬೇಕು: ಡಿ.ವೈ.ಎಸ್.ಪಿ ಮಿಥುನ್.

ನಿಸ್ವಾರ್ಥದ ಸೇವೆಯೆ ಸಂಘಟನೆ ಗುರಿಯಾಗಬೇಕು: ಡಿ.ವೈ.ಎಸ್.ಪಿ ಮಿಥುನ್.

 ಸಕಲೇಶಪುರ: ಸಂಘಟನೆಗಳು ಯಾವುದೆ ಪ್ರತಿಫಲದ ಅಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಬೇಕು ಎಂದು ಡಿ.ವೈ.ಎಸ್.ಪಿ ಮಿಥುನ್ ಹೇಳಿದರು.

   ಪಟ್ಟಣದ ದಾಮೋದರ ಕಾಂಪ್ಲೆಕ್ಸ್ ನಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ (ರಿ) ತಾಲೂಕು ಘಟಕದ ಕಚೇರಿ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿದ ನಂತರ ಮಾತನಾಡಿಗಳು ಯಾವುದೆ ಸಂಘಟನೆಗಳಿರಲಿ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಬೇಕು. ಇದರಿಂದ ಮಾತ್ರ ಸಂಘಟನೆಗೆ ಉತ್ತಮ ಹೆಸರು ಬರಲು ಸಾಧ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಈ ನಿಟ್ಟಿನಲ್ಲಿ ನೊಂದ ಜನರಿಗೆ ನ್ಯಾಯ ಒದಗಿಸಲು ಮುಂದಾಗಲಿ ಎಂದರು.

  ಸಂಘಟನೆಯ ಜಿಲ್ಲಾಧ್ಯಕ್ಷರಾದ ಜೀವನ್ ಗೌಡ ಮಾತನಾಡಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ (ರಿ) ಸಂಘಟನೆ ರಾಜ್ಯಮಟ್ಟದ ಸಂಘಟನೆಯಾಗಿದ್ದು ಸಂಘಟನೆ ಜಿಲ್ಲೆ ಹಾಗೂ ತಾಲೂಕಿನಲ್ಲಿ ಜನಪರವಾಗಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ಕಾರ್ಯ ವಿಸ್ತಾರಕ್ಕಾಗಿ ಸ್ವಂತ ಕಚೇರಿಯನ್ನು ಇಂದು ತೆರೆಯಲಾಗುತ್ತಿದೆ ಎಂದರು.

   ಇದೇ ಸಂಧರ್ಭದಲ್ಲಿ ರಥೋತ್ಸವಕ್ಕೆ ಬಂದ ಜನರಿಗೆ ಸಂಘಟನೆ ವತಿಯಿಂದ ಸಿಹಿ ಹಂಚಲಾಯಿತು. ಈ ಸಂಧರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ಪದಾಧಿಕಾರಿಗಳಾದ ವಕೀಲ ಪ್ರದೀಪ್ , ಎಮ್. ಪಿ. ಬಸವರಾಜ್,ಎಮ್. ಪಿ. ಮಂಜುನಾಥ್, ಬಾಲರಾಜ್,ಪ್ರಸನ್ನ ಬಾಳೆಗದ್ದೆ,ಹನೀಫ್, 

ಪ್ರದೀಪ್ ಮಾವಿನಹಳ್ಳಿ,ಕಿಟ್ಟಿ, ಕಿರಣ್, ಸಚ್ಚಿನ್, ಜಗದೀಶ್, ಮಲ್ಲೇಶ್ ಹಾಗೂ ಇತರರು ಹಾಜರಿದ್ದರು.

RELATED ARTICLES
- Advertisment -spot_img

Most Popular