ಬಾಳ್ಳುಪೇಟೆ ಗ್ರಾಮ ಪಂಚಾಯಿತಿಯಾ ಉಪಾಧ್ಯಕ್ಷರಾಗಿ ಶಿಲ್ಪ ಮಲ್ಲಿಕ್ ಆಯ್ಕೆ.
ರೋಚಕತೆಯಿಂದ ಕೂಡಿದ ಚುನಾವಣೆಯಲ್ಲಿ ಲಾಟರಿ ಮೂಲಕ ಆಯ್ಕೆಯಾದ ಶಿಲ್ಪ ಮಲ್ಲಿಕ್
ಸಕಲೇಶಪುರ : ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎನಿಸಿಕೊಂಡಿರುವ ಬಾಳ್ಳುಪೇಟೆ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ಚಿಕ್ಕನಾಯಕನಹಳ್ಳಿ ವಾರ್ಡಿನ ರತ್ನ ಅವರು ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರು ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು ಮೂವರು ನಾಮಪತ್ರ ಸಲ್ಲಿಸಿದ್ದು ಜೆಡಿಎಸ್ ಬೆಂಬಲಿತ ಇಬ್ಬರು ಹಾಗೂ ಬಿಜೆಪಿ ಬೆಂಬಲಿತ ಒಬ್ಬರು ನಾಮಪತ್ರ ಸಲ್ಲಿಸಿದರು.
ಅಂತಿಮವಾಗಿ ಜೆಡಿಎಸ್ ಬೆಂಬಲಿತ ಇಬ್ಬರು ಸದಸ್ಯರು ಸಮನಾದ ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಬಾಳ್ಳುಪೇಟೆ ವಾರ್ಡಿನ ಶಿಲ್ಪ ಮಲ್ಲಿಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರೋಚಕತೆಯಿಂದ ಕೂಡಿದ ಚುನಾವಣೆ : ಬಾಳ್ಳುಪೇಟೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಚುನಾವಣೆಗೆ ಮೂವರು ಸ್ಪರ್ಧಿಸಿದ್ದರು. ಜೆಡಿಎಸ್ ಬೆಂಬಲಿತ ಶಿಲ್ಪ ಮಲ್ಲಿಕ್ , ಪರಿಶಿಷ್ಟ ಪಂಗಡ ವರ್ಗದಿಂದ ಕವಿತ ಹಾಗೂ ಬಿಜೆಪಿ ಬೆಂಬಲಿತ ಶಾಂತ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದು ಹಾಗೂ ಕವಿತಾ ಪರವಾಗಿ ಎಂಟು ಜನ ಸದಸ್ಯರು ಮತ ಚಲಾಯಿಸಿದ್ದಾರೆ. ವಿಚಿತ್ರ ಎಂದರೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಂತ ಅವರು ತಮ್ಮ ಮತವನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ದಾನವಾಗಿ ನೀಡುವುದರ ಮೂಲಕ ತಮ್ಮ ಮತವನ್ನು ತಾವೇ ತಮ್ಮ ಸ್ಥಾನಕ್ಕೆ ಚಲಾಯಿಸಿಕೊಳ್ಳದೆ ಇದ್ದಿದ್ದು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ದಿಗ್ಭ್ರಮೆ ಮೂಡಿಸಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರ ಪ್ರಕಾಶ್ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೋಮೇಗೌಡ, ಜೆಡಿಎಸ್ ಯುವ ಮುಖಂಡ ಉದೀಶ್ ಲೊಕೇಶ್, ಪಾಲಾಕ್ಷ,ಸುರೇಶ್ ಜೆಡಿಎಸ್ ಮುಖಂಡರು ಸೇರಿದಂತೆ ಮುಂತಾದವರಿದ್ದರು.