ಸಕಲೇಶಪುರ ಅಟ್ಟಿಸಿಕೊಂಡು ಬಂದ ಕಾಡಾನೆಗಳ ಹಿಂಡು ಕೂದಲೆಳೆ ಅಂತರದಲ್ಲಿ ಪಾರಾದ ಇಟಿಎಫ್ ಸಿಬ್ಬಂದಿ.
ಸಕಲೇಶಪುರ : ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡುವ ಸಿಬ್ಬಂದಿಯನ್ನು ಕಿರೇಹಳ್ಳಿ ಸಮೀಪ ಓಡಿಸಿಕೊಂಡು ಹೋದ ಘಟನೆ ನಡೆದಿದೆ.
ತಾಲೂಕಿನ ಹಲಸುಲಿಗೆ ಹಾಗೂ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯ ಆರ್.ಆರ್.ಟಿ ಸಿಬ್ಬಂದಿ ಕಾಡಾನೆಗಳ ಚಲನವಲನದ ಮೇಲೆ ತೀವ್ರ ನಿಗ ವಹಿಸಿದ್ದಾರೆ.
ಈ ನಡುವೆ ಇಂದು ಮಧ್ಯಾಹ್ನ ಒಂದು ಬದಿಯಿಂದ ಮತ್ತೊಂದು ಬದಿಗೆ ಕಾಡಾನೆಗಳು ದಾಟುತ್ತಿದ್ದ ವೇಳೆ ಇಟಿಎಫ್ ಸಿಬ್ಬಂದಿ ಓರ್ವನನ್ನು ಕಾಡಾನೆಗಳು ಅಟ್ಟಿಸಿಕೊಂಡು ಘೀಳಿಡುತ್ತಾ ಓಡಿಸಿಕೊಂಡು ಹೋಗಿದೆ. ಈ ಸಂದರ್ಭದಲ್ಲಿ ಇಟಿಎಫ್ ಸಿಬ್ಬಂದಿ ಮೈಕ್ ಮೂಲಕ ಓಡು ಓಡು ಎಂದು ಅನೌನ್ಸ್ ಮಾಡಿದ ವೇಳೆ ಎದ್ದುಬಿದ್ದು ಓಡಿದ ಕಾರು ಚಾಲಕ ಕೂದಲೆಲೆಯ ಅಂತರದಲ್ಲಿ ಪಾರಾಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ.
ಜೀವದ ಹಂಗು ತೊರೆದು ಇಟಿಎಫ್ ಸಿಬ್ಬಂದಿ ಕಾಡಾನೆಗಳ ಚಲನವಲನ ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ. ಇಂಥ ಸಿಬ್ಬಂದಿಗಳಿಗೆ ಆಧುನಿಕ ಉಪಕರಣಗಳನ್ನು ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.