ಮಳೆಗಾಲದ ನಂತರವೇ ಕಾಮಗಾರಿ ಪೂರ್ಣ- ನಿತಿನ್ ಗಡ್ಕರಿ
ಹಾಸನ- ಸಕಲೇಶಪುರ- ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ (ಎನ್ಎಚ್ 75) 45 ಕಿ.ಮೀ. ಚತುಷ್ಪಥ ಕಾಮಗಾರಿ ಬಗ್ಗೆ ನಿತಿನ್ ಗಡ್ಕರಿ ಮಾತು
ನವದೆಹಲಿ: ಹಾಸನ- ಸಕಲೇಶಪುರ- ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ (ಎನ್ಎಚ್ 75) 45 ಕಿ.ಮೀ. ಚತುಷ್ಪಥ ಈ ಯೋಜನೆಯಲ್ಲಿ 30 ಕಿ.ಮೀ.ಯ ಕಾಮಗಾರಿ ಪೂರ್ಣಗೊಂಡಿದೆ. ಸಂಪೂರ್ಣ ಕಾಮಗಾರಿ ಮಳೆಗಾಲದ ನಂತರವೇ ಮುಗಿಯಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, “5 ಕಿ.ಮೀ. ಕಾಮಗಾರಿಯನ್ನು ಜೂನ್ ಒಳಗೆ ಪೂರ್ಣಗೊಳಿಸಲು ಗುರಿ ಇರಿಸಿಕೊಳ್ಳಲಾಗಿದೆ. ಈ ಭಾಗದ ರಸ್ತೆ ಇಕ್ಕಟ್ಟಾಗಿದ್ದು, ಉಳಿದ 10 ಕಿ.ಮೀ.ಯ ಕಾಮಗಾರಿ ಕೈಗೆತ್ತಿಕೊಳ್ಳಲು ರಸ್ತೆ ಬಂದ್ ಮಾಡಬೇಕಾಗುತ್ತದೆ. ಈ ಕಾಮಗಾರಿಯನ್ನು ಮಳೆಗಾಲ ಮುಗಿದ ನಂತರ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು
ಸಕಲೇಶಪುರ- ಮಾರನಹಳ್ಳಿ ನಡುವಿನ ಹೆದ್ದಾರಿಯ ನಿರ್ವಹಣಾ ಕಾಮಗಾರಿಯ ಗುತ್ತಿಗೆಯನ್ನು ಜನವರಿ 9ರಂದು ನೀಡಲಾಗಿದ್ದು, ಈಗಾಗಲೇ ಕೆಲಸ ಶುರುವಾಗಿದೆ. ಹಾ ಸ ನ ಮಾ ರ ನ ಹ ಳ್ಳಿ ಚತುಷ್ಪಥಕ್ಕಾಗಿ ಅರಣ್ಯ ಭೂಮಿ ಸೇರಿದಂತೆ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೊದಲು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಕಂಪನಿ ದಿವಾಳಿಯಾಯಿತು. ಬಳಿಕ ಬೇರೆ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಯಿತು ಭಾಗದಲ್ಲಿ ಅಧಿಕ ಮಳೆಯಾಗುತ್ತದೆ. ಇದರಿಂದ ಕಾಮಗಾರಿ ವಿಳಂಬವಾಗಿದೆ. ಸಾಂಕ್ರಾಮಿಕ ಹಾಗೂ ರಸ್ತೆ ಮಾಡಿ ಕಾಮಗಾರಿ ನಡೆ స్థితి ನಿರ್ಮಾಣವಾಗಿದ್ದು ವಿಳಂಬಕ್ಕೆ ಕಾರಣ’ ಎಂದು ಅವರು ಹೇಳಿದ್ದಾರೆ.