Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶ್ವರ ಸ್ವಾಮಿ ರಥೋತ್ಸವ ಹಿನ್ನೆಲೆ ದಿನಾಂಕ 06-02-2023ರಂದು ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರ ನಿಷೇದ

ಸಕಲೇಶ್ವರ ಸ್ವಾಮಿ ರಥೋತ್ಸವ ಹಿನ್ನೆಲೆ ದಿನಾಂಕ 06-02-2023ರಂದು ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರ ನಿಷೇದ

ಸಕಲೇಶ್ವರ ಸ್ವಾಮಿ ರಥೋತ್ಸವ ಹಿನ್ನೆಲೆ ದಿನಾಂಕ 06-02-2023ರಂದು ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರ ನಿಷೇದ

ಸಕಲೇಶಪುರ: ದಿನಾಂಕ 06/02/2023 ರಂದು ಸಕಲೇಶಪುರ ಪಟ್ಟಣದ ಶ್ರಸಕಲೇಶ್ವರಸ್ವಾಮಿರವರ ದಿವ್ಯ ಬ್ರಹ್ಮ ರಥೋತ್ಸವವು ಜರುಗಲಿದ್ದು, ರಥೋತ್ಸವದ ಅಂಗವಾಗಿ ರಥವು ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶ್ರೀ ಸಕಲೇಶಪುರಸ್ವಾಮಿ ದೇವಸ್ಥಾನದ ವೃತ್ತದಿಂದ ಸಕಲೇಶಪುರ ನಗರದ ಪುರಸಭೆಯವರೆಗೆ ಸಾಗಲಿದ್ದು, ಈ ಸಮಯದಲ್ಲಿ ಸುಮಾರು 10 ರಿಂದ 15 ಸಾವಿರ ಭಕ್ತಾಧಿಗಳು ಸೇರುವುದರಿಂದ ರಾಷ್ಟ್ರೀಯ ಹೆದ್ದಾರಿ-75 ರ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಾದ್ಯವಾಗದೇ ಇರುವ ಕಾರಣ ದಿನಾಂಕ:06/02/2023 ಬೆಳಗ್ಗೆ 7-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ಸದರಿ ರಸ್ತೆಯಲ್ಲಿ ಭಾರಿ ವಾಹನಗಳು ಸಕಲೇಶಪುರ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹೊರತು ಪಡಿಸಿ ವಿವಿಧ ಮಾದರಿಯ ಟ್ರಕ್, ಟ್ಯಾಂಕ‌ರ್ ಹಾಗೂ ಇತರೆ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಇತರ ಲಘು ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

 1. ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ಲಘು ವಾಹನಗಳು ಸಕಲೇಶಪುರ ನಗರದ ಪಶು ಚಿಕಿತ್ಸಾಲಯದ ಕಡೆಯಿಂದ, ಹಳೆಸಂತೆವೇರಿ ರಸ್ತೆಯಲ್ಲಿ ಪ್ರವೇಶಿಸಿ ಆಜಾದ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದು ಹೋಗುವುದು.

2. ಹಾಸನದಿಂದ ಮಂಗಳೂರಿಗೆ ಸಂಚರಿಸುವ ವಾಹನಗಳು ಬಸವಣ್ಣ ವೃತ್ತ,ತರಕಾರಿ ಮಾರ್ಕೆಟ್ ಮೂಲಕ ಅಶೋಕ ರಸ್ತೆ ಪ್ರವೇಶಿಸಿ ಬಸವೇಶ್ವರ ರಸ್ತೆಯ ಮೂಲಕ ಕಾಸ್ಮೋಪಾಲಿಟನ್ ಕ್ಲಬ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಪ್ರವೇಶಿಸುವುದು.

3. ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ವಿವಿಧ ಮಾದರಿಯ ಟ್ರಕ್, ಟ್ಯಾಂಕರ್, ಇತರೆ ಭಾರಿ ವಾಹನಗಳು ಮಾರನಹಳ್ಳಿ ಬಳಿ ನಿಲುಗಡೆ ಮಾಡಲಾಗುವುದು ಹಾಗೂ ಹಾಸನದ ಕಡೆಯಿಂದ ಬರುವ ವಾಹನಗಳನ್ನು ಬಾಳುಪೇಟೆಯ ಬಳಿ ನಿಲುಗಡೆ ಮಾಡುವುದು.

 ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಕಲೇಶಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-75ರ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ ಹಾಸನ ಜಿಲ್ಲಾಧಿಕಾರಿ ಅರ್ಚನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular