ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ:
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ಕುಟುಂಬದವರ ಮೇಲೆ ದೂರು ದಾಖಲು
ಸಕಲೇಶಪುರ: ಸೊಸೆಗೆ ವರದಕ್ಷಿಣೆ ಕಿರುಕುಳ ಸೇರಿ ಹಲವು ರೀತಿಯ ತೊಂದರೆ ನೀಡಿದ ನೀಡಿದ ಹಾಗೂ ಗರ್ಭಪಾತ ಮಾಡಿಸಿದ ಆರೋಪದಡಿ ಕೆಜಿಎಫ್ ಅಧ್ಯಕ್ಷ ಡಾ.ಹೆಚ್.ಟಿ. ಮೋಹನ್ ಕುಮಾರ್, ಅವರ ಪತ್ನಿ ಜ್ಯೋತಿ ಮೋಹನ್, ಪುತ್ರ ಯಶಾಂಕ್ ಹಾಗೂ ಹಾಸನದ ಜೈಕಿರಣ್ ಎಂಬುವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೈಸೂರು ಮೂಲದ ವಿನುತಾ (ಹೆಸರು ಬದಲಿಸಲಾಗಿದೆ) ಎಂಬುವರನ್ನು 2021 ಮಾರ್ಚ್ 3 ರಂದು ತಾಲೂಕಿನ ಹುರುಡಿ ಗ್ರಾಮದ ಹೆಚ್.ಎಂ.ಯಶಾಂಕ್ ಅವರೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ಆ ಸಂದರ್ಭದಲ್ಲಿ 40-45 ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಅಲ್ಲದೆ ಒತ್ತಾಯ ಪೂರ್ವಕವಾಗಿ 2 ಲಕ್ಷ ರೂ. ವರದಕ್ಷಿಣೆಯಾಗಿ ವೀಣಾ ಅತ್ತೆ-ಮಾವ ಪಡೆದು ಕೊಂಡಿದ್ದರು.
ಮದುವೆಯಾದ ಒಂದು ತಿಂಗಳ ನಂತರ ಗಂಡ ಯಶಾಂಕ್, ವಿಕೃತ ಮನಸ್ಥಿತಿಯಿಂದ ತೊಂದರೆ ತೊಂದರೆ ಕೊಡಲು ಆರಂಭಿಸಿದರು ಎಂದು ದೂರಲಾಗಿದೆ.
ಪ್ರತಿ ದಿನ ರಾತ್ರಿ 3 ಗಂಟೆವರೆಗೂ ಕೈಂ ಸ್ಟೋರಿ ನೋಡುತ್ತಾ ಮಾರನೇ ದಿನ ಅದನ್ನು ನನ್ನ ಮೇಲೆ ಪ್ರಯೋಗ ಮಾಡುವ ರೀತಿಯಲ್ಲಿದ್ದರು ಎಂದು ನೊಂದ ವೀಣಾ ಅಳಲು ತೋಡಿಕೊಂಡಿದ್ದಾರೆ. ಗಂಡ ಹಾಗೂ ಅತ್ತೆ-ಮಾವ ಧನದಾಹಿಗಳಾಗಿದ್ದು, ತವರು ಮನೆಯಿಂದ ಪದೇ ಪದೇ ಹಣ ತರಬೇಕೆಂದು ಒತ್ತಾಯಿಸಿ, ಕಿರುಕುಳ ನೀಡಿ 8-9 ಲಕ್ಷ ರೂ.ಗಳನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
`ಅತ್ತೆ-ಮಾವ ನನಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಪ್ರತಿನಿತ್ಯ ಕಿರುಕುಳದ ಮಾತುಗಳನ್ನಾಡಿ ಮೂರಾಲ್ಕು ಬಾರಿ ದೈಹಿಕ ಹಲ್ಲೆ ಮಾಡಿದ್ದಾರೆ. ಮದುವೆಯಾಗಿ ವರ್ಷದ ನಂತರ ಮನೆಯವರಿಗೆ ಕಿರುಕುಳದ ವಿಷಯ ತಿಳಿಸಿದ ನಂತರ ಹಿರಿಯರ ಸಮಕ್ಷಮದಲ್ಲಿ ರಾಜಿ ಪಂಚಾಯ್ತಿ ಮಾಡಿ ಬುದ್ದಿವಾದ ಹೇಳಿದಾಗ, ಇನ್ನು ಮುಂದೆ ಸರಿಯಾಗಿ ಜೀವನ ಮಾಡುತ್ತೇನೆ ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದರು. ನಮ್ಮ ತಂದೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಸೇರಬೇಕು. ಆ ಆಸ್ತಿಯನ್ನು ಈಗಲೇ ತರಬೇಕು ಎಂದು ಒತ್ತಡ ಹಾಕಿದ್ದಲ್ಲದೆ ತಂದೆಯ ನಿವೃತ್ತಿ ಹಣವನ್ನೂ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ಅತ್ತೆ ಜ್ಯೋತಿ ಮೋಹನ್ ಅವರು ದೈಹಿಕ ಹಲ್ಲೆ ಮಾಡಿ ಹೊಟ್ಟೆಗೆ ಒದ್ದಿದ್ದರಿಂದ ಗರ್ಭಪಾತ ವಾಗಿದೆ ಎಂದು ವೀಣಾ ಅಳಲು ತೋಡಿಕೊಂಡಿದ್ದಾರೆ. ಈ ಎಲ್ಲದಕ್ಕೂ ಪ್ರಚೋದನೆ ನೀಡುತ್ತಿದ್ದ ಹಾಸನದ ಜೈಕಿರಣ್ ಅವರೇ ನೇರ ಹೊಣೆಗಾರರಾಗಿದ್ದಾರೆ.
2022 ಏ.3 ರಿಂದ 7 ರ ವರೆಗೆ ಊಟ ತಿಂಡಿ ನೀಡದೆ, ವಿವಸ್ತ್ರಗೊಳಿಸಿ ಕೊಡಬಾರದ ಹಿಂಸೆ ಕೊಟ್ಟು ಮನೆಯಿಂದ ಹೊರ ಹಾಕಿದ್ದರು. ಈ ವಿಚಾರವನ್ನು ತವರು ಮನೆಗೆ ಹೇಳಿದಾಗ ಅವರೊಂದಿಗೆ ಜಗಳ ಆಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನಗೆ ಮಾನಸಿಕ, ದೈಹಿಕ ಹಿಂಸೆ, ಹಲ್ಲೆ ಗರ್ಭಪಾತ ಮಾಡಿಸಿರುವ, ವರದಕ್ಷಿಣೆ ಕಿರುಕುಳ ನೀಡಿ, ಕೌಟುಂಬಿಕ ದೌರ್ಜನ್ಯ ಮಾಡಿರುವ ಪತಿ ಯಶಾಂಕ್, ಮಾವ ಮೋಹನ್ ಕುಮಾರ್, ಅತ್ತೆ ಜ್ಯೋತಿ ಹಾಗೂ ಜೈಕಿರಣ್ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕಳೆದ ಜ.29 ರಂದು ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.