ದೂರದೃಷ್ಟಿ ಇಲ್ಲದ ಸಂಪೂರ್ಣ ನಿರಾಶಾದಾಯಕ ಬಜೆಟ್’:ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್.
ಮೋದಿ ಸರ್ಕಾರದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಮಧ್ಯಮ ಮತ್ತು ಬಡವರ್ಗ ಸೇರಿದಂತೆ ಯಾರಿಗೂ ಬಜೆಟ್ನಿಂದ ಅನುಕೂಲವಾಗಿಲ್ಲ. ಹೂಡಿಕೆದಾರರಿಗೆ ಯಾವುದೇ ರೀತಿಯ ಕೊಡುಗೆ ಇಲ್ಲ ಎಂದು ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ. “ರಫ್ತು ಹೆಚ್ಚು ಮಾಡುವ ಬಗ್ಗೆ ಮುಂಗಡ ಪತ್ರದಲ್ಲಿ ಸ್ಪಷ್ಟ ಮಂಡನೆ ಇಲ್ಲ. ದೇಶದ ಮೂಲಭೂತ ಸೌಕರ್ಯಗಳಿಗೆ ಯಾವುದೇ ಹೂಡಿಕೆಯ ಬಗ್ಗೆ ತಿಳಿಸಿಲ್ಲ. ಆರ್ಥಿಕ ಅಭಿವೃದ್ಧಿಯ ಬಗ್ಗೆ ಮುಂಗಾಣ್ಕೆ ಇಲ್ಲ” ಎಂದರು.
ಅಂತಾರಾಷ್ಟ್ರೀಯವಾಗಿ ಕಚ್ಚಾ ತೈಲದ ಬೆಲೆ ಶೇ 34 ಇಳಿಕೆ ಆಗಿದೆ. ಗ್ಯಾಸ್ ಬೆಲೆಯಲ್ಲಿ ಶೇ 40 ಇಳಿಕೆ ಆಗಿದೆ. ಆದರೆ ಬಜೆಟ್ನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಇಳಿಸಿಲ್ಲ. ಕನಿಷ್ಟ ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ 20 ರೂ ಇಳಿಕೆ ಮಾಡಬಹುದಿತ್ತು. ಗ್ಯಾಸ್ ಸಿಲಿಂಡರ್ ದರವನ್ನು 500 ರೂ ವರೆಗೆ ಇಳಿಕೆ ಮಾಡಬೇಕಿತ್ತು” ಎಂದು ಹೇಳಿದರು.
ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಮತ್ತು ಅದಕ್ಕೆ ಸಂಬಂಧಿಸಿ ವಿಷಯದಲ್ಲಿ ಬಜೆಟ್ನಲ್ಲಿ ಏನೂ ಇಲ್ಲ. ಖಾಸಗಿ ಬಂಡವಾಳ ಹೂಡಿಕೆ ಹಾಗೂ ಎಮ್ಎಸ್ಎಮ್ಇಗಳ ಸ್ಥಾಪನೆಗೆ ಅಗತ್ಯ ಕ್ರಮಗಳ ಬಗ್ಗೆಯೂ ತಿಳಿಸಿಲ್ಲ. ಸರ್ಕಾರಿ ಉದ್ಯೋಗದ ಬಗ್ಗೆಯೂ ಬಜೆಟ್ನಲ್ಲಿ ಯಾವುದೇ ಮಾರ್ಗಸೂಚಿ ಇಲ್ಲ. ನಿರುದ್ಯೋಗದ ಕುರಿತು ಬಜೆಟ್ನಲ್ಲಿ ಯಾವುದೇ ದೃಷ್ಟಿಕೋನಗಳಿಲ್ಲ” ಎಂದು ಹರಿಹಾಯ್ದರು.
ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಭಾರತದ ಬೆಳವಣಿಗೆಯ ಮೂಲ. ಅವುಗಳಿಗೂ ಯಾವುದೇ ಪ್ರಾಶಸ್ತ್ಯ ನೀಡಿಲ್ಲ. ಕೇವಲ ಹಳೆಯ ಯೋಜನೆಗಳನ್ನೇ ಮತ್ತೆ ಪಾಲಿಶ್ ಮಾಡಿ ಮಂಡಿಸಲಾಗಿದೆ ಮತ್ತು ಅದಕ್ಕೆ ಒಂದಿಷ್ಟು ಬಂಡವಾಳವನ್ನು ಹೆಚ್ಚಾಗಿ ಹೂಡಿಕೆ ಮಾಡಲಾಗಿದೆ. ರೈತರ ಬೇಡಿಕೆಯ ಬೆಂಬಲ ಬೆಲೆಯ ಬಗ್ಗೆ ಬಜೆಟ್ನಲ್ಲಿ ಯಾವುದೇ ದೃಷ್ಟಿಕೋನಗಳಿಲ್ಲ” ಎಂದು ಮುರುಳಿ ಮೋಹನ್ ಟೀಕಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನರು ಮುನಿಸಿಕೊಂಡಿದ್ದು ಈ ಬಾರಿ ಬದಲಾವಣೆ ಬಯಸಿದ್ದಾರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಮುರುಳಿ ಮೋಹನ್ ವಿಶ್ವಾಸ ವ್ಯಕ್ತಪಡಿಸಿದರು.