ಸಕಲೇಶಪುರ ಮಿನಿ ವಿಧಾನಸೌಧದಲ್ಲಿ ಮಡಿವಾಳ ಮಾಚಿದೇವಾ ಜಯಂತಿ.
ಸಕಲೇಶಪುರ :12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ ಎಂದು ಪುರಸಭಾ ಅಧ್ಯಕ್ಷ ಕಾಡಪ್ಪ,ಹೇಳಿದರು
ಬುಧುವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಡಿವಾಳ ಮಾಚಿದೇವಾ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು
ಈ ಸಂಧರ್ಭದಲ್ಲಿ , ತಾಲ್ಲೂಕು ವೈದ್ಯಧಾಧಿಕಾರಿ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್,ಮಡಿವಾಳ ಸಮಾಜದ ಅಧ್ಯಕ್ಷ ಉಮೇಶ್,ಗೌರವ ಅಧ್ಯಕ್ಷ ವಿಶ್ವನಾಥ್,ಕಾರ್ಯದರ್ಶಿ ವೇದು ನಂದನ್, ಮಧು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜ ಮುಖಂಡರು ಇದ್ದರು