ಕಾಫಿನಾಡಿನಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಘಗಳ ಬಲವರ್ಧನೆ.
ಸಕಲೇಶಪುರ: ಸಕಲೇಶಪುರ ತಾಲ್ಲೂಕಿನ ಯಸಳೂರು ಗ್ರಾಮದಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘವನ್ನು ಯಸಳೂರು ವೀರಶೈವ ಸಂಘದ ಮುಖಂಡ ವೈ.ಬಿ.ಕೈಲಾಸಮೂರ್ತಿ, ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷೆ ಗೀತಾ ರಾಜೇಶ್,ನಿರ್ದೇಶಕ ರವಿತೇಜ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತಧನಂಜಯ್,ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಅರೇಹಳ್ಳಿ ಮಹಿಳಾ ಸಂಘದ ಪ್ರತಿನಿಧಿ
ಗೀತಾ ಶಿವರಾಜ್, ಅರೇಹಳ್ಳಿ ವೀರಶೈವ ಮುಖಂಡರಾದ ವಿಂಪು ಸಂತೋಷ್ ಇನ್ನು ಮುಂತಾದವರು ಉದ್ಘಾಟನೆ ನಡೆಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಗೀತಾರಾಜೇಶ್, ನಾವುಗಳು ಹತ್ತಾರು ಸಂಘ- ಸಂಸ್ಥೆಗಳು ಸೇರಿದಂತೆ ಸ್ವ-ಸಹಾಯ ಸಂಘದಲ್ಲಿ ಕೂಡ ಭಾಗಿಯಾಗಿದ್ದು, ಆದರೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿನ ಮೂಲ ಉದ್ದೇಶವಾದ ಗ್ರಾಮೀಣರ ಅಭಿವೃದ್ಧಿ ಜೊತೆಗೆ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯುವ ಇಂತಹ ಮಹಿಳಾ ಸ್ವ ಸಹಾಯ ಸಂಘದಲ್ಲಿ ತೊಡಗಿಸಿಕೊಳ್ಳಲು ನಮಗೆ ಹರ್ಷವಾಗುತ್ತದೆ. ಇಂತಹ ಪರಿಕಲ್ಪನೆಯನ್ನು ಮಹಿಳಾ ಕುಲಕ್ಕೆ ಅರ್ಪಿಸಿದ ಪುಷ್ಪಗಿರಿ ಶ್ರೀಗಳ ಸಾಧನೆ ಅಗಮ್ಯವಾಗಿದೆ ಎಂದರು. ನಿರ್ದೇಶಕರಾದ ರವಿತೇಜ ಮಾತನಾಡಿ,ಪುಷ್ಪಗಿರಿ ಜಗದ್ಗುರುಗಳು ನಮಗೆ ಉತ್ತಮ ಒಡನಾಟವಿದೆ. ಅವರು ಕೂಡ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಗ್ಗೆ ತಿಳಿಸಿದ್ದು, ಆದರೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿರುವ
ಸವಲತ್ತು-ಸೌಲಭ್ಯಗಳ ಹಾಗೇಯೆ ಅವಕಾಶ ಬಗ್ಗೆ ಯೋಜನಾ ಧಿಕಾರಿಗಳಾದ ವಿನುತರವರು ತಿಳಿಸಿದ ಸಂದರ್ಭದಲ್ಲಿ ಪೂಜ್ಯರ ಪರಿಕಲ್ಪನೆ ನಿಜಕ್ಕೂ ಅನನ್ಯವಾಗಿದೆ. ಇತ್ತೀಚಿನ ಸರ್ಕಾರದ ಜನಪ್ರತಿನಿಧಿಗಳು ಮಹಿಳಾ ಸಮಾನತೆ ಮತ್ತು ಮಹಿಳಾ ಯೋಜನೆ ಬಗ್ಗೆ ಮಾತನಾಡುತ್ತಾರೆ.ಆದರೆ ಯೋಜನೆಗಳ ಸೌಲಭ್ಯಗಳು ಜನರಿಗೆ ತಲುಪುತ್ತಿಲ್ಲ, ಆದರೆ ಪುಷ್ಪಗಿರಿ ಶ್ರೀಗಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘದ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ನೀಡುವ ಜೊತೆಗೆ ಅವರಿಗೆ ಕಾರ್ಯಗಾರ ಮತ್ತು ಸಮಾವೇಶವನ್ನು ನಡೆಸುತ್ತಿದ್ದು, ಪ್ರತಿ ಮಹಿಳೆಯರು ಇಂತಹ ಸಂಸ್ಥೆಯಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಯಸಳೂರು ವೀರಶೈವಮುಖಂಡ ವೈ.ಬಿ.ಕೈಲಾಸಮೂರ್ತಿಮಾತನಾಡಿ, ಪುಷ್ಪಗಿರಿ ಮಹಾಸಂಸ್ಥಾನ ಒಂದು ಜಾತಿ,ಧರ್ಮಕ್ಕೆಸೀಮಿತವಾಗದೆ ಪ್ರತಿ ಜಾತಿ,ಧರ್ಮವನ್ನು ಪ್ರೀತಿಸುವ ನಿಟ್ಟಿನಲ್ಲಿ ಆರಂಭಿಸಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಯೋಜನಾಧಿಕಾರಿ ವಿನುತಧನಂಜಯ್ ಮಾತನಾಡಿ, 2020 ರಲ್ಲಿ ಪೂಜ್ಯ ಪುಷ್ಪಗಿರಿ ಜಗದ್ಗುರುಗಳು ಸ್ಥಾಪಿಸಿದ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯದ ಹತ್ತು ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವ ಸಹಾಯ ಸಂಘವನ್ನುಸ್ಥಾಪಿಸಿದೆ. ಗ್ರಾಮೀಣಾ ಮಹಿಳೆಯರಿಗೆ ಕೌಶಲ್ಯ ತರಬೇತಿಗಳನ್ನು ನೀಡುವ ಜೊತೆಗೆ ಅವರು ಸ್ವಾವಲಂಬಿ ಬದುಕಿಗೆ ಸ್ವ-ಉದ್ಯೋಗ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ವಿಶೇಷವಾಗಿ ಆರೋಗ್ಯ,ಪರಿಸರ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದ್ಬಳಿಕೆ ಬಗ್ಗೆ ಮಾಹಿತಿ ಕಾರ್ಯಾಗಾರ ನೀಡುತ್ತಾ ಬಂದಿದೆ. ಮಲೆನಾಡು ಭಾಗದಲ್ಲಿ ಕೂಡ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಲವರ್ಧನೆಯಾಗುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಪದಾಧಿಕಾರಿಗಳಾದ ಗೀತಾ, ಪುಷ್ಪ, ಲತಾ,ಜ್ಯೋತಿ, ಕೋಮಲ,ತುಂಗಭದ್ರ,ಆಶ್ವಿನಿ, ಚಂದ್ರಕಲಾ,ವಿನುತ,ಅನ್ನಪೂರ್ಣಶ್ವರಿ, ಜುಮುನಾ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.