ಸಕಲೇಶಪುರ ನಿಲ್ಲದ ಕಾಡಾನೆ ಉಪಟಳ. ಕಾಫಿ ತೋಟದಲ್ಲಿ ಹಿಂಡಾನೆಗಳ ಪರೇಡ್.
ಕಾಫಿ ಕುಯ್ಲಿನ ಸಮಯದಲ್ಲಿ ಜನರಲ್ಲಿ ಜೀವ ಭಯ ಸೃಷ್ಟಿಸಿರುವ ಆನೆ ಸಂಚಾರ.
ಸಕಲೇಶಪುರ : ಕಾಡಾನೆ ಉಪಟಳ ಮುಂದುವರಿದಿದೆ. ಕಾಫಿ ತೋಟದಲ್ಲಿ ಹಿಂಡಾನೆಗಳು ಗಣರಾಜೋತ್ಸವ ದಿನದಂದು ಪರೇಡ್ ನಡೆಸಿವೆ. ತಾಲ್ಲೂಕಿನ, ಹಳೆಕೆರೆ ಗ್ರಾಮದ ಕಾಫಿ ತೋಟದಲ್ಲಿ 20 ಕ್ಕು ಹೆಚ್ಚು ಕಾಡಾನೆಗಳು ಕಂಡು ಬಂದಿದ್ದು, ಮೂರು ಮರಿಯಾನೆಗಳ ಜೊತೆ ಊರಿಂದ ಊರಿಗೆ ಗಜಪಡೆ ಅಲೆಯುತ್ತಿದೆ. ಆನೆ ಹಿಂಡಿನಿಂದ ಯಾವುದೇ ಪ್ರಾಣ ಹಾನಿಯಾಗದಂತೆ ಕಾಡಾನೆ ಗುಂಪನ್ನು ಎಲಿಫೆಂಟ್ ಟಾಸ್ಕ್ ಫೋರ್ಸ್ ಟೀಂ ಹಿಂಬಾಲಿಸುತ್ತಿದೆ. ಆನೆಗಳಿರುವ ಬಗ್ಗೆ ಅಲ್ಲಿನ ಜನರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಕಾಫಿ ಕುಯ್ಲಿನ ಸಮಯದಲ್ಲಿ ಆನೆಗಳ ಜನರಲ್ಲಿ ಜೀವ ಭಯ ಹುಟ್ಟಿಸಿದೆ. ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಜನರಲ್ಲಿ ಜೀವ ಭಯ ಸೃಷ್ಟಿ ಮಾಡುತ್ತಿರುವ ಗಜಪಡೆ ಸ್ಥಳಾಂತರಕ್ಕೆ ಜನರುಬ ಆಗ್ರಹಿಸಿದ್ದಾರೆ.