ಬಿಜೆಪಿ ತೊರೆದು ಜೆಡಿಎಸ್ ಸೇರಿದ ವನಗೂರು ವ್ಯಾಪ್ತಿಯ ಕಾರ್ಯಕರ್ತರು.
ಸಕಲೇಶಪುರ : ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ನಾಯಕತ್ವ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳನ್ನು ಮೆಚ್ಚಿ ಹೆತ್ತೂರು ಹೋಬಳಿ ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡರು.
ಶಶಿಕುಮಾರ್, ಅನಿಲ್ ಕುಮಾರ್, ರೇವಣ್ಣ ಬಿಜೆಪಿ ಕಾರ್ಯಕರ್ತರು ಶಾಸಕ ಎಚ್ ಕೆ ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷದ ಶಾಲು ಹಾಕುವ ಮೂಲಕ ಮೂಲಕ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಲಿ ಅಧ್ಯಕ್ಷ ಕವನ ಗೌಡ ಜೆಡಿಎಸ್ ಮುಖಂಡ ಅಣ್ಣೇಗೌಡ , ಕಳಲೆ ಗುರುರಾಜ್, ಕಲೀಲ್ ಪಾಶ ಗೋದ್ದು ಕೌಶಿಕ್, ಶೀಧರ್, ವಿನಯ್ ಸೇರಿದಂತೆ ಮುಂತಾದವರು ಇದ್ದರು.