ಸಕಲೇಶಪುರ : ಪತ್ರಕರ್ತ ಎಸ್. ಎಲ್ ಸುಧೀರ್ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಆಯ್ಕೆ.
ಸಕಲೇಶಪುರ : ಉದಯೋನ್ಮುಖ ಪತ್ರಕರ್ತರಾದ ಸಕಲೇಶಪುರ ತಾಲೂಕು ಉದಯವಾಣಿ ವರದಿಗಾರರಾದ ಎಸ್. ಎಲ್ ಸುಧೀರ್ ರವರು ಈ ಬಾರಿ ತಾಲೂಕು ಆಡಳಿತದ ವತಿಯಿಂದ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾಗುತ್ತಿದ್ದಾರೆ.
ಪತ್ರಕರ್ತ ಸುಧೀರ್ ಅವರ ಪರಿಚಯ
ಹೊಸದಿಗಂತ ಪತ್ರಿಕೆಯಲ್ಲಿ ತಾಲೂಕು ವರದಿಗಾರನಾಗಿ ಆರಂಭಿಸಿ ಕಳೆದ 8 ವರ್ಷಗಳಿಂದ ಉದಯವಾಣಿ ತಾಲೂಕು ವರದಿಗಾರನಾಗಿ ಸೇವೆ ಸಲ್ಲಿಕೆ, ಎಚ್.ಸಿ.ಎನ್ ವಾಹಿನಿ ,ಈ ಟಿವಿ ಭಾರತ್ ,ಜ್ಞಾನ ದೀಪ ಸೇರಿದಂತೆ ಹಲವು ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಸೇವೆ ಸಲ್ಲಿಕೆ.ಪ್ರಸ್ತುತ ಉದಯವಾಣಿ ತಾಲೂಕಿನ ವರದಿಗಾರನಾಗಿ ಹಾಗೂ ವಾಸ್ತವ ಆನ್ ಲೈನ್ ನ್ಯೂಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು 2019-2022ನೇ ಸಾಲಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಪಸ್ತುತ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪತ್ರಿಕೋದ್ಯಮ ಬಿಟ್ಟರೆ ಕ್ರಿಕೆಟ್ ಹಾಗೂ ಬಾಡ್ಮಿಂಟನ್ ಆಟಗಾರರಾಗಿದ್ದು ವಿವಿಧ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸನ್ಮಾನಕ್ಕೆ ಭಾಜನರಾಗುತ್ತಿರುವ ಸುಧೀರ್ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ.