Sunday, April 20, 2025
Homeಸುದ್ದಿಗಳುಬೆಳಗೋಡು ಹೋಬಳಿ ಕೇಂದ್ರದ ಸುತ್ತಮುತ್ತ ಬೆಳ್ಳಂ ಬೆಳಗೆ ಮಕನ ಹಾಗೂ ಭೀಮ ಕಾಡಾನೆಗಳ ಓಡಾಟ.

ಬೆಳಗೋಡು ಹೋಬಳಿ ಕೇಂದ್ರದ ಸುತ್ತಮುತ್ತ ಬೆಳ್ಳಂ ಬೆಳಗೆ ಮಕನ ಹಾಗೂ ಭೀಮ ಕಾಡಾನೆಗಳ ಓಡಾಟ.

ಬೆಳಗೋಡು ಹೋಬಳಿ ಕೇಂದ್ರದ ಸುತ್ತಮುತ್ತ ಬೆಳ್ಳಂ ಬೆಳಗೆ ಮಕನ ಹಾಗೂ ಭೀಮ ಕಾಡಾನೆಗಳ ಓಡಾಟ.

ಸಕಲೇಶಪುರ : ಸಕಲೇಶಪುರ ಭಾಗದಲ್ಲಿ ಕೆಲವು ಕಡೆಗಳಲ್ಲಿ ಮುಂಜಾನೆ ಸಮಯದಲ್ಲಿ ಕಾಡಾನೆಗಳ ಪ್ರತ್ಯಕ್ಷವಾಗುವುದು ಹೆಚ್ಚಾಗ ತೊಡಗಿದೆ.ಇಂದು ಮುಂಜಾನೆ ಬೆಳಗೋಡು, ಗೋಳಗೊಂಡೆ ಗ್ರಾಮದ ಸುತ್ತಮುತ್ತ  ಕಾಡಾನೆ ಸಂಚಾರ ನಡೆಸಿದೆ.ಬೆಳಗಿನ ಸಮಯದಲ್ಲಿ ಕೂಲಿ ಕಾರ್ಮಿಕರು ವಿದ್ಯಾರ್ಥಿಗಳು ಉದ್ಯೋಗಸ್ಥರು ತೆರಳುವ ವೇಳೆ ಕಾಡಾನೆಗಳು ಓಡಾಟ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಮಕನ ಆನೆಯು ಮನೆಗಳ ಮೇಲೆ ದಾಳಿ ನಡೆಸುವ ಪ್ರವೃತ್ತಿ ಹೊಂದಿದ್ದು ಈಗಾಗಲೇ ಬಾಳ್ಳುಪೇಟೆಯ ಕೆಲವು ಕಡೆಗಳಲ್ಲಿ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ. ಇದೇ ಆನೆಯೂ ಹಲಸುಲಿಗೆ ಗ್ರಾಮದಲ್ಲೂ ಮನೆಗಳ ಮೇಲೆ ದಾಳಿ ನಡೆಸಿ ಕಿಟಕಿ ಗಾಜು,ಬಾಗಿಲು ಮುರಿದು ಹಾಕಿತ್ತು.

 ಈಗಾಗಲೇ ಮನೆಗಳ ಆಕ್ರಮಣಕಾರಿ ಮನೋಭಾವ ಹೊಂದಿರುವ ಮಕನ ಆನೆಯನ್ನು ಸೆರೆ ಹಿಡಿಯುವಂತೆ ಶಾಸಕರು ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

RELATED ARTICLES
- Advertisment -spot_img

Most Popular