ಜ.26 ರಂದು (ನಾಳೆ )ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ.
ಸಕಲೇಶಪುರ : ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಜನವರಿ 26 ಗುರುವಾರ ಜರುಗಲಿದೆ.
ತಾಲೂಕಿನ ಯಸಳೂರು ಹೋಬಳಿ ದೊಡ್ಡನಳ್ಳಿ ಮತ್ತು ಅದರಗೆರೆಯ ಚೌಡೇಶ್ವರಿ ಅಮ್ಮನವರ ಮೂರನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಜ 25 ರ ಬುಧವಾರ (ಇಂದು )ಸಂಜೆ 6:00 ಗಂಟೆಯಿಂದ ಪೂಜಾ ಕಾರ್ಯಕ್ರಮ ಮತ್ತು ಶಾರದಾ ಕಲಾ ತಂಡದವರಿಂದ ನೃತ್ಯ ಹಾಗೂ ಜನಪದ ಕಾರ್ಯಕ್ರಮ ಅನ್ನ ಸಂತರ್ಪಣೆ ನಡೆಯಲಿದೆ.
ಜನವರಿ 26 ಗುರುವಾರ(ನಾಳೆ )ಬೆಳಗ್ಗೆ 6:00 ಗಂಟೆಯಿಂದ ಕಳಸಾಭಿಷೇಕ ಹಣ್ಣು ಕಾಯಿ ಮಹಾಮಂಗಳಾರತಿ ಬಲಿ ಪೂಜೆ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ನಡೆಯಿರಿ ಎಂದು ಸಮಿತಿಯವರು ತಿಳಿಸಿದ್ದಾರೆ.