ವಳಲಹಳ್ಳಿ ,ಹೆತ್ತೂರು ಸುತ್ತಮುತ್ತ ಸುರಿದ ಮಳೆ: ಕಂಗಾಲಾದ ಕಾಫಿ ಬೆಳೆಗಾರರು
ಸಕಲೇಶಪುರ: ತಾಲೂಕಿನ ಹೆತ್ತೂರು ವಳಲಹಳ್ಳಿ ಸೇರಿದಂತೆ ವಿವಿಧೆಡೆ ಅಕಾಲಿಕ ಮಳೆ ಸುರಿದಿದ್ದು ಕಾಫಿ ಬೆಳೆಗಾರರಿಗೆ ಆತಂಕ ತಂದಿರುತ್ತದೆ.ಕಾಫಿ ಹಾಗೂ ಭತ್ತದ. ಕುಯ್ಲಿನ ಸಮಯವಾಗಿದ್ದು ಕುಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಹಲವಡೆ ಹರಡಲಾಗಿದೆ.ಏಕಾಏಕಿ ಸುರಿದ ಮಳೆಯಿಂದ ಒಣಗಿಸಲು ಹಾಕಿದ್ದ ಕಾಫಿಯನ್ನು ರಕ್ಷಿಸಲು ಬೆಳೆಗಾರರು ಪರದಾಡಿದರು.
ಅಕಾಲಿಕ ಮಳೆಯು ಮೂಡಿಗೆರೆ, ಬೇಲೂರು ತಾಲ್ಲೂಕಿನ ವಿವಿಧಡೆ ಸುರಿದಿದ್ದು ಕಾಫಿ ಹಾಗೂ ಬತ್ತದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.