ಜಾತ್ರಾ ಮೈದಾನದಲ್ಲಿ ಸಂಪೂರ್ಣ ಕಸ ವಿಲೇವಾರಿ ಮಾಡದ ಪುರಸಭಾ ವಿರುದ್ದ ಕರವೇ ಪ್ರವೀಣ್ ಶೆಟ್ಟಿ ಬಣದ ಆಕ್ರೋಷ
ಸಕಲೇಶಪುರ: ಪಟ್ಡಣದ ಜಾತ್ರ ಮೈದಾನದಲ್ಲಿ ಸಂಪೂರ್ಣವಾಗಿ ಕಸ ವಿಲೇವಾರಿ ಮಾಡದಿದ್ದಲ್ಲಿ ಪುರಸಭೆ ವಿರುದ್ದ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದ್ದಾರೆ.
ಪಟ್ಟಣದ ಜಾತ್ರಮೈದಾನದಲ್ಲಿ ಪುರಸಭೆ ತ್ಯಾಜ್ಯವನ್ನು ವೀಕ್ಷಿಸಿದ ನಂತರ ಮಾತನಾಡಿ ಕಳೆದ 2 ವರ್ಷಗಳಿಂದ ಕಸದ ರಾಶಿ ಯಲ್ಲೆ ಜಾತ್ರೆ ಮಾಡಲಾಗುತ್ತಿದೆ.ಈ ಬಾರಿ ಕಸ ವಿಲೇವಾರಿ ಮಾಡಲು ಸುಮಾರು 16 ಲಕ್ಷ ರೂ ಟೆಂಡರ್ ಕರೆಯಲಾಗಿದ್ದು ಆದರೆ ಸ್ವಲ್ಪ ಕಸ ಮಾತ್ರ ತೆಗೆಯಲಾಗಿದೆ. ಕಸ ವಿಲೇವಾರಿ ಹೆಸರಿನಲ್ಲಿ ಲಕ್ಷಾಂತರ ರೂ ಹಣ ಭ್ರಷ್ಟಾಚಾರ ಎಸೆಗಲಾಗಿದೆ. ಶಾಸಕರು ಸಹ ಕಣ್ಣು ಮುಚ್ಚಿ ನಿದ್ರಿಸುತ್ತಿದ್ದಾರೆ.ಶಾಸಕರ ಜಾಣ ಕುರುಡಿಂದಲೆ ಪುರಸಭೆಯಲ್ಲಿ ಭ್ರಷ್ಟಾಚಾರ ನಡೆಯಲು ಕಾರಣವಾಗಿದೆ.ಸಂಪೂರ್ಣ ಕಸ ವಿಲೇವಾರಿ ಮಾಡುವ ವರೆಗೂ ಕಸದ ಸಮೀಪವೆ ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ಮಾಡಲಾಗುತ್ತದೆ ಎಂದಿದ್ದಾರೆ.