Monday, April 21, 2025
Homeಸುದ್ದಿಗಳುವನಗೂರು ಸಂಜೀವಿನಿ ಶೆಡ್ ಕಾಮಗಾರಿ ಕುರಿತು ಕೆಲವು ಮಹಿಳೆಯರಿಗೆ ತಪ್ಪು ಕಲ್ಪನೆ ಹಾಗೂ ರಾಜಕೀಯ ಪ್ರೇರಿತರಾಗಿ...

ವನಗೂರು ಸಂಜೀವಿನಿ ಶೆಡ್ ಕಾಮಗಾರಿ ಕುರಿತು ಕೆಲವು ಮಹಿಳೆಯರಿಗೆ ತಪ್ಪು ಕಲ್ಪನೆ ಹಾಗೂ ರಾಜಕೀಯ ಪ್ರೇರಿತರಾಗಿ ನನ್ನ ಮೇಲೆ ಆಪಾದನೆ: ಶಾಸಕ ಎಚ್.ಕೆ ಕುಮಾರಸ್ವಾಮಿ.

ವನಗೂರು ಸಂಜೀವಿನಿ ಶೆಡ್ ಕಾಮಗಾರಿ ಕುರಿತು ಕೆಲವು ಮಹಿಳೆಯರಿಗೆ ತಪ್ಪು ಕಲ್ಪನೆ ಹಾಗೂ ರಾಜಕೀಯ ಪ್ರೇರಿತರಾಗಿ ನನ್ನ ಮೇಲೆ ಆಪಾದನೆ: ಶಾಸಕ ಎಚ್.ಕೆ ಕುಮಾರಸ್ವಾಮಿ.

 

ಶಾಸಕ ಎಚ್ ಕೆ ಕುಮಾರಸ್ವಾಮಿ ಅವರ ಮೇಲೆ ಮಾಡಿರುವ ಆರೋಪ ಶುದ್ಧಸುಳ್ಳು ವಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ  ಸತೀಶ್ ಹೇಳಿಕೆ.

ಸಕಲೇಶಪುರ: ವನಗೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಜೀವಿನಿ ಶೆಡ್ ನಿರ್ಮಾಣಕ್ಕೆ ಸಂಭಂದಿಸಿದಂತೆ ಅಲ್ಲಿನ ಮಹಿಳಾ ಸಂಘದವರು ನೀಡಿರುವ ಹೇಳಿಕೆ ಸಂಪೂರ್ಣ ನಿರಾಧಾರವಾಗಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.

ಪಟ್ಡಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಲ್ಲಿನ ಕೆಲವು ಮಹಿಳೆಯರು ಸಂಜೀವಿನ ಶೆಡ್ ಕುರಿತು ನೀಡಿರುವ ಹೇಳಿಕೆ ರಾಜಕೀಯ ಪ್ರಚೋದಿತವಾಗಿದೆ. ಈ ಒಂದು ಯೋಜನೆಗೂ ನನಗೂ ಏನು ಸಂಬಂಧವಿಲ್ಲ. ಈ ಯೋಜನೆ ನರೇಗಾ ಯೋಜನೆಯಲ್ಲಿ ಗ್ರಾ.ಪಂ ಕೈಗೊಂಡಿರುವ ಯೋಜನೆಯಾಗಿದೆ. ಶಾಸಕನಾದವನು ಎಲ್ಲಿ ಬೇಕಾದರು ಗುದ್ದಲಿ ಪೂಜೆ ನೆರವೇರಿಸಬಹುದು ಆದರೆ ನನಗೆ ಆ ಯೋಜನೆಗೆ ಸಂಬಂಧವಿಲ್ಲ. ಗ್ರಾ.ಪಂ ವತಿಯಿಂದ ಜಾಬ್ ಕಾರ್ಡ್ ಇದ್ದವರಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ ಬೇಕಿದಲ್ಲಿ ಜಾಬ್ ಕಾರ್ಡ್ ಇರುವ ಸಂಘದ ಮಹಿಳೆಯರೇ ಗ್ರಾ.ಪಂಯವರನ್ನು ಸಂಪರ್ಕಿಸಿ ಕಾಮಗಾರಿಯನ್ನು ಭಾಗಿಯಾಗಬಹುದಾಗಿದೆ. ಸರಿಯಾಗಿ ಏನನ್ನು ತಿಳಿದುಕೊಳ್ಳದೆ ನನ್ನ ಮೇಲೆ ಆರೋಪ ಮಾಡಿರುವುದು ಸರಿಯಲ್ಲ ಎಂದರು.

 ವನಗೂರು ಗ್ರಾ.ಪಂ ಅಧ್ಯಕ್ಷ ಸತೀಶ್(ಬೆಳ್ಳಿ)ಮಾತನಾಡಿ,

ಕೆಲವರ ರಾಜಕೀಯ ಪ್ರಚೋದನೆಯಿಂದ ಮಹಿಳೆಯರು ಆ ರೀತಿ ಮಾತನಾಡಿದ್ದಾರೆ. ಈ ಯೋಜನೆಯನ್ನು ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಯಾರದೋ ಮಾತುಗಳನ್ನು ಕೇಳಿಕೊಂಡು ಶಾಸಕರ ವಿರುದ್ದ ಸುದ್ದಿಗೋಷ್ಠಿ ಮಾಡಿ ನಗೆಪಾಟಲಿಗೀಡಾಗಿದ್ದಾರೆ ಎಂದರು. ನರೇಗಾ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ನೂರು ದಿನಗಳ ಕೂಲಿ ನೀಡಬೇಕಾಗಿರುವುದು ಕರ್ತವ್ಯವಾಗಿದೆ. ಸಂಜೀವಿನಿ ಶೆಡ್ ನಿರ್ಮಾಣ ಯಾವುದೇ ಗುತ್ತಿಗೆ ನೀಡಿ ಕಾಮಗಾರಿ ನಡೆಸುವ ಕೆಲಸವಲ್ಲ ಈ ಕುರಿತಂತೆ ಈಗಾಗಲೇ ಸ್ವಸಾಯ ಸಂಘಗಳ ಮುಖ್ಯಸ್ಥರ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಸುದ್ದಿಗೋಷ್ಠಿ ಮಾಡಿರುವವರು ಬಿಜೆಪಿ ಪಕ್ಷದ ಏಜೆಂಟ್ ರೀತಿ ಕಂಡು ಬರುತ್ತಿದ್ದಾರೆ. ಈ ವಿಚಾರವಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಆಧಾರ ರಹಿತ ಆರೋಪ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -spot_img

Most Popular