Monday, November 25, 2024
Homeಸುದ್ದಿಗಳುಜಗತ್ತು ಕಂಡ ಜಂಗಮರ ವಿಸ್ಮಯಗಳು.*  *ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದಿನಚರಿ ಮತ್ತು ಶ್ರೀ...

ಜಗತ್ತು ಕಂಡ ಜಂಗಮರ ವಿಸ್ಮಯಗಳು.*  *ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದಿನಚರಿ ಮತ್ತು ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ದಾಸೋಹಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ನೋಡಿ.*  *ಶ್ರೀಗಳ ದಿನಚರಿಯ ವಿಸ್ಮಯ ನೋಡಿ* 

*ಜಗತ್ತು ಕಂಡ ಜಂಗಮರ ವಿಸ್ಮಯಗಳು.*

*ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದಿನಚರಿ ಮತ್ತು ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ದಾಸೋಹಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ನೋಡಿ.*

*ಶ್ರೀಗಳ ದಿನಚರಿಯ ವಿಸ್ಮಯ ನೋಡಿ*

1) ಬೆಳಗಿನ ಜಾವ 2.15 ನಿಂದ ಜಾಗೃತಿ

2) 2.45 ರವರೆಗೆ ಶರಣರ ಈ ತತ್ವ ಪಠಣ

3) 3.00 ಸ್ನಾನಾದಿ ನಿತ್ಯ ಕರ್ಮಗಳ ವಿಧಿ

4) 3.00 ರಿಂದ 5.30 ಶಿವಪೂಜೆ ಆ ಪ್ರಸಾದ ಸ್ವೀಕಾರ

5) 5.30ರಿಂದ 6.00 ಮುಂಜಾನೆ ಸಾಮೂಹಿಕ ಪ್ರಾರ್ಥನೆ

6) ಬೆಳಿಗ್ಗೆ 6.15 ರಿಂದ 7.10 ರವರೆಗೆ ವಿದ್ಯಾರ್ಥಿಗಳಿಗೆ

ಸಂಸ್ಕೃತ ಪಾಠ ಬೋಧನೆ

7) 7.10ರಿಂದ 74ರವರೆಗೆ ಬಂದ ದಿನಪತ್ರಿಕೆಗಳ ವೀಕ್ಷಣೆ

8) 7.40 ರಿಂದ 8.40 ರವರೆಗೆ ಪತ್ರ ವ್ಯವಹಾರ

9) 8.40 ರಿಂದ 9.00 ಟಪಾಲು ಪರಿಶೀಲನೆ

10) 9.5 ರಿಂದ 9.10ರವರೆಗೆ ಪ್ರಸಾದ ವ್ಯವಸ್ಥೆಯ

 ಪರಿಶೀಲನೆ

11) 9,10 ರಿಂದ 9.30 ರವರೆಗೆ ಶ್ರೀಕ್ಷೇತ್ರದ ಕಾರ್ಯವೀಕ್ಷಣೆ

12) 10.30 ರಿಂದ 10.45 ರವರೆಗೆ ಸ್ವತಃ ಶ್ರೀಗಳೇ ಪತ್ರಗಳಿಗೆ

ಉತ್ತರಿಸುವುದು

13) 10.45 ರಿಂದ 12.00 ರವರೆಗೆ ವಿದ್ಯಾರ್ಥಿಗಳ ಊಟದ

ವ್ಯವಸ್ಥೆಯ ಪರಿಶೀಲನೆ

15) ಮಧ್ಯಾಹ್ನ 12.00 ರಿಂದ 1.00 ಗಂಟೆಯವರೆಗೆ ಬಂದ

ಭಕ್ತರಿಗೆ ಮಂಚದ ಹತ್ತಿರ ಯಂತ್ರಧಾರಣೆ

16) ಮಧ್ಯಾಹ್ನ 1.00 ರಿಂದ 2.30 ರ ವರೆಗೆ ಭಕ್ತಾದಿಗಳಿಗೆ

ಸಂದರ್ಶನ ಹಾಗೂ ಕಾರ್ಯಾಲಯದಲ್ಲಿ ಕಾರ್ಯಮಗ್ನತೆ

17) ಮಧ್ಯಾಹ್ನ 2.30 ರಿಂದ 3.30 ಪೂಜೆ ಮತ್ತು ಪ್ರಸಾದ

ಸ್ವೀಕಾರ

18) ಸಂಜೆ 3.30 ರಿಂದ 5.30 ಕಾರ್ಯಾಲಯದಲ್ಲಿ ಸಂಸ್ಥೆಯ

ಕಾರ್ಯಚಟುವಟಿಕೆಗಳ ಪರಿಶೀಲನೆ

19) ಸಂಜೆ 5.30 ರಿಂದ 5.45 ಪ್ರಸಾದ ಸಿದ್ಧತೆಯ ಪರಿಶೀಲನೆ

20) .ಸಂಜೆ 5.45 ರಿಂದ 6.30 ಗದ್ದೆ, ತೋಟ, ಕಟ್ಟಡ ಕೆಲಸಗಳ ಮೇಲ್ವಿಚಾರಣೆ

21) 6.30 ರಿಂದ 7.00 ವಿದ್ಯಾರ್ಥಿಗಳ ಸಾಮೂಹಿಕ

ಪ್ರಾರ್ಥನೆಯಲ್ಲಿ

22) ರಾತ್ರಿ 7.00 ರಿಂದ 7.15 ವಿದ್ಯಾರ್ಥಿಗಳಿಗೆ ಆಶೀರ್ವಚನ

23) ರಾತ್ರಿ 7.15 ರಿಂದ 7.45 ಭಕ್ತಾದಿಗಳ ಸಂದರ್ಶನ ಹಾಗೂ

ಕಾರ್ಯಾಲಯಗಳ ಕಾರ್ಯ ಪರಿಶೀಲನೆ

24) ರಾತ್ರಿ 7.45 ರಿಂದ 8.00 ಪ್ರಸಾದ ನಿಲಯದ ವ್ಯವಸ್ಥೆಯ

ವೀಕ್ಷಣೆ

25) ರಾತ್ರಿ 8.00 ರಿಂದ 8.30 ಕಾರ್ಯಾಲಯದ ವ್ಯವಹಾರ

26) .ರಾತ್ರಿ 8.30ರಿಂದ 7 45 ಶರಣರ ತತ್ವ ಪಠಣ

27) ರಾತ್ರಿ 8.45 ರಿಂದ 9.00 ಸ್ನಾನ

28) ರಾತ್ರಿ 9.00 ರಿಂದ 9.30 ಪೂಜೆ ಹಾಗೂ ಲಘು ಪ್ರಸಾದ

ಸ್ವೀಕಾರ

29) ರಾತ್ರಿ 9.30 ರಿಂದ 10.30 ನಾಟಕದ ಅಭ್ಯಾಸ ಮೇಲ್ವಿ

ಚಾರಣೆ

30) ರಾತ್ರಿ 10.30 ರಿಂದ 10.45 ದಿನಚರಿ ಬರೆಯುವುದು.

31) ರಾತ್ರಿ 11 ಗಂಟೆಗೆ ನಿದ್ರಾಮುದ್ರೆ

ಈ ಮಧ್ಯೆ ಬಿಡುವು ಮಾಡಿಕೊಂಡು ಭಕ್ತರ ಹಾಗೂ

ಸಾರ್ವಜನಿಕರ ಕೋರಿಕೆಯ ಮೇಲೆ ಪೂಜೆ, ಸಮಾರಂಭಗಳಲ್ಲಿ ಭಾಗವಹಿಸುವುದು ಗ್ರಾಮಾಂತರ ಬಂಧುಗಳ ಬಗೆಹರಿಯದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದು… ಇತ್ಯಾದಿ.

 *ಶ್ರೀ ಕ್ಷೇತ್ರದಲ್ಲಿ ಒಂದು ದಿನದ ದಾಸೋಹಕ್ಕೆ ತಗಲುವ ಅಂದಾಜು ಖರ್ಚಿನ ವಿವರಗಳು.8,000 ವಿದ್ಯಾರ್ಥಿಗಳ ಎರಡು ಹೊತ್ತಿನ ಊಟ,ಮಧ್ಯಾಹ್ನದ ಉಪಹಾರ ಮತ್ತು ಪ್ರತಿದಿನ ಬರುವ ಭಕ್ತರಿಗೆ (ಹಬ್ಬ,ಹರಿದಿನಗಳನ್ನು ಬಿಟ್ಟು)*

ಅಕ್ಕಿ. 50 ಕ್ವಿಂಟಾಲ್

ರಾಗಿಹಿಟ್ಟು. 30 ಕ್ವಿಂಟಾಲ್

ತೊಗರಿಬೇಳೆ. 5 ಕ್ವಿಂಟಾಲ್

ತರಕಾರಿ. 5 ಕ್ವಿಂಟಾಲ್

ಈರುಳ್ಳಿ. 5 ಕ್ವಿಂಟಾಲ್

ರವೆ (ಉಪ್ಪಿಟ್ಟಿಗೆ). 7 ಕ್ವಿಂಟಾಲ್

ಉಪ್ಪು. 2 ಕ್ವಿಂಟಾಲ್

ಸಾಂಬಾರು ಪುಡಿ. 2 ಕ್ವಿಂಟಾಲ್

ಖಾರದಪುಡಿ. ಮೇಲಿನ ಸಾಮಗ್ರಿಗಳಿಗುಣವಾಗಿ

ತೆಂಗಿನ ಕಾಯಿ. 600

ಹುಣಸೇಹಣ್ಣು. 90 ಕೆಜಿ

ಹಾಲು(ಮಜ್ಜಿಗೆಗೆ). 500 ಲೀಟರ್

ಮೆಣಸಿನ ಕಾಯಿ. 40 ಕೆಜಿ

ಕಡಲೆಕಾಯಿ ಎಣ್ಣೆ. 250 ಕೆಜಿ

ಸುಮಾರು ಒಂದು ದಿನಕ್ಕೆ ಖರ್ಚಿನ ಅಂದಾಜು ಒಂದು ಲಕ್ಷದ

ಇಪ್ಪತ್ತೈದು ಸಾವಿರ ರೂಪಾಯಿಗಳು.

ಯಡೇಹಳ್ಳಿ”ಆರ್”ಮಂಜುನಾಥ್.

9901606220

RELATED ARTICLES
- Advertisment -spot_img

Most Popular